ಬಲಿದಾನದ ದಿನ..ರಕ್ತದಾನ ಶಿಬಿರ.

0
452

ಬೆಂಗಳೂರು/ಕೃಷ್ಣರಾಜಪುರ: ಸ್ವಾತಂತ್ರ್ಯ ಹೋರಟಗಾರರು ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿ ದೇಶಾಭಿಮಾನ ಮೆರದಿದ್ದಾರೆ, ಅದರಂತೆ ಇಂದಿನ ಯುವಕರು ರಕ್ತದಾನ ಮಾಡುವ ಮೂಲಕ ಅವಶ್ಯವಿರುವವರಿಗೆ ನೆರವಾಗಿ ಮಾನವೀಯತೆ ಮೆರೆಯಬೇಕೆಂದು ಭಗತ್ ಸೇನೆಯ ಅಧ್ಯಕ್ಷ ಪಣೀಂದ್ರ ಸಿಂಹ ತಿಳಿಸಿದರು.

ಇಲ್ಲಿನ ಬಿಬಿಎಂಪಿ ಮುಂಭಾಗದಲ್ಲಿ ಬಲಿದಾನ ದಿನದ ಅಂಗವಾಗಿ ಭಗತ್ ಸಿಂಗ್ ಸಂಘಟನೆವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಭಿರದಲ್ಲಿ ಭಾಗವಹಿಸಿ ಮಾತನಡಿದ ಅವರು, ಭಾರತ ದೇಶ ಬ್ರಿಟೀಷರ ದಬ್ಬಾಳಿಕೆಯಿಂದ ನಲುಗಿಹೋಗಿದ್ದ ಸಂದರ್ಭದಲ್ಲಿ ಸ್ವತಂತ್ರಕ್ಕಾಗಿ ಹೋರಟ ನಡೆಸಿದ ಅನೇಕ ಹೋರಾಟಗಾರರು ತಮ್ಮ ಜೀವವನ್ನು ಬಲಿಯಾಗಿಸಿ ದೇಶದ ಪ್ರಜೆಗಳ ಸ್ವಾಭಿಮಾನವನ್ನು ಎತ್ತಿಹಿಡಿದಿದ್ದಾರೆ.

ಅಂತಹವರಲ್ಲಿ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ತಿರುಗಿ ಬಿದ್ದ ಕ್ರಾಂತಿ ಕಾರಿಗಳಾಗಿದ್ದು, ಜೈಲು ವಾಸ ಅನುಭವಿಸಿ ನೇಣು ಗಂಬಕ್ಕೆ ಶರಣಾದರು, ಅವರ ನೆನಪಿನ ಅಂಗವಾಗಿ ಇಂದಿನ ಯುವಕರೂ ದೇಶದ ಕುರಿತು ಅಭಿಮಾನ ಬೆಳೆಸಿಕೊಂಡು ರಾಷ್ಟ್ರದ ಹಿತ ಕಾಯುವಲ್ಲಿ ಶ್ರಮಿಸಬೇಕೆಂದರು. ಹಲವರು ಇಂದು ಅಪಘಾತ ಮತ್ತು ರೋಗಗಳಿಗೆ ತುತ್ತಾಗಿ ರಕ್ತಹೀನತೆಯಿಂದ ಬಳಲುತ್ತಿದ್ದು, ಪ್ರಾಣ ಹಾನಿಯೂ ಸಂಭವಿಸುತ್ತಿದೆ, ಆರೋಗ್ಯವಂತ ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಿ, ರಕ್ತದ ಅಗತ್ಯವಿರುವ ರೋಗಿಗಳಿಗೆ ಸಹಕಾರಿಯಾಗಿ  ಮಾನವೀಯತೆ ಮೆರೆಯಬೇಕೆಂದು ತಿಳಿಸಿದರು. ರಕ್ತದ ಗುಂಪುಗಳು ವಿವಿಧ ಬಗೆಯಿಮದ ಕೂಡಿದ್ದು ಅವಶ್ಯವಿರುವ ರೋಗಿಗೆ ತನ್ನ ರಕ್ತದ ಗುಂಪು ಸಿಗದೆ ತೊಂದರೆ ಸಿಲುಕುವುದು ಸಹ ಉಂಟು ಇದಕ್ಕೆ ಪರಿಹಾರವಾಗಿ ಪ್ರತಿಯೊಬ್ಬ ಯುವಕರೂ ರಕ್ತದಾನಕ್ಕೆ ಮುಂದಾದರೆ ಪ್ರತಿಯೊಂದು ರಕ್ತದ ಗುಂಪೂ ಲಭ್ಯವಾಗಿ ಅನಾಹುತಕ್ಕೆ ಪರಿಹಾರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಚಿನ್ನಪ್ಪ ರಾಜು, ಹರೀಶ್, ಗಿರೀಶ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here