ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡುವಂತೆ ಒತ್ತಾಯ

0
245

ಬಳ್ಳಾರಿ/ಹೊಸಪೇಟೆ: ಹಂಪಿ- ಭೂಮಿ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಕೆಲಸ ನೀಡುವಂತೆ ಒತ್ತಾಯಿಸಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯ ಸದಸ್ಯರು ಹೊಸಪೇಟೆಯ   ಕಮಲಾಪುರದ ಬಳಿಯಿರುವ ಅಟಲ್ ಬಿಹಾರಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕಿನ ಬಳಿ  ಪ್ರತಿಭಟನೆ ನಡೆಸಿದರು. ಸ್ಥಳೀಯವಾಗಿ ಜೂಯಾಲಾಜಿಕಲ್  ಪಾರ್ಕಿಗೆ ಕಮಲಾಪುರದ ರೈತರಭೂಮಿ ನೀಡಿದ್ದಾರೆ. ಇದರಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ರೈತರು ಹೆಚ್ಚು ಭೂಮಿನೀಡಿ ಬಡತನ ಎದುರಿಸುತ್ತಿದ್ದಾರೆ. ಆರಂಭವಾಗಿರುವ ಜೂಯಾಲಾಜಿಕಲ್  ಪಾರ್ಕಿನಲ್ಲಿ  ಭೂಮಿ  ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಕೆಲಸ ನೀಡಿದರೆ ಅನುಕೂಲ ವಾಗುತ್ತದೆ.ಹೊರಗಡೆ ಯವರಿಗೆ ಕೆಲಸನೀಡುವುದಕ್ಕಿಂತ ಸ್ಥಳೀಯ ಭೂಮಿ ಕಳೆದುಕೊಂಡವರಿಗೆ ಸೂಕ್ತ ಕೆಲಸ ನೀಡಬೇಕು,  ಉತ್ತಮ ಹುದ್ದೆಗಳಿಗೂ ಅರ್ಹ  ವಿದ್ಯಾವಂತರು  ಇದ್ದು, ಅವರು ನಿರುದ್ಯೋಗಿಗಳಾಗಿದ್ದಾರೆ .ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ  ಡಿಎಸ್‍ಎಸ್ ಜಿಲ್ಲಾಸಮಿತಿಯ ದೇವಪ್ರಿಯ,  ಕಮಲಾಪುರಡಾ||ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಗಂಗಪ್ಪ. ತಾಲೂಕು ಸಂಚಾಲಕ ಚಿದಾನಂದ ಹೆಚ್ ಕೆಂಚಪ್ಪ,ರವಿಕುಮಾರ, ಕನ್ನೇಶ್ವರ ದೇವರಮನೆ, ಹೆಚ್.ಪಿ ಕಾವ್ಯ, ಚಾಂದ್‍ಬಾಷಾ ಮತ್ತೀತರಿದ್ದರುಮನವಿ ಪತ್ರ ಸ್ವೀಕರಿ ಸಿಎಬಿವಿಪಿ  ಡಿ ಎಫ್ ಓ ಪುರುಷೋತ್ತಮ ಈ ಕುರಿತು  ಸರಕಾರದ  ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.​

LEAVE A REPLY

Please enter your comment!
Please enter your name here