ಉಚಿತ ಕುಡಿಯುವ ನೀರು ವಿತರಣೆ

0
290

ಬಳ್ಳಾರಿ:ಬರಗಾಲದಿಂದ ಕಂಗೆಟ್ಟು ಹೋದ ಜನರಿಗೆ ಬಳ್ಳಾರಿಯ ಜಯ ಕರ್ನಾಟಕ ಸಂಘಟನೆ ಸದ್ಯ ವರದಾನವಾಗಿ ಪರಿಣಿಮಿಸಿದೆ.  ಬಳ್ಳಾರಿಯಲ್ಲಿ ಭೀಕರ ಬರಗಾಲವಿದ್ದು, ಕುಡಿಯುವ ನೀರಿಗೂ ಸಹ ತತ್ವಾರ ಎದುರಿಸುವಂತಾಗಿದೆ. ಬಳ್ಳಾರಿಯಲ್ಲಿ ಸುಮಾರು 18 ದಿನದಿಂದ 20 ದಿನಕ್ಕೊಮ್ಮೆ ಕುಡಿವ ನೀರು ಬಿಡುವ ಸಮಯವಿದೆ. ಜನರ ಸಂಕಷ್ಟವನ್ನು ಅರಿತ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು , ಕಳೆದ 8-10 ದಿನಗಳಿಂದ ಬಳ್ಳಾರಿಯಲ್ಲಿನ ಬಡವರಿಗೆ ಮತ್ತು  ವಿಶೇಷವಾಗಿ ಸ್ಲಂ ಜನರಿಗೆ ಉಚಿತವಾಗಿ ಕುಡಿವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಎಲ್ಲ ಓಣಿಗಳಲ್ಲಿ ಉಚಿತ ಕುಡಿವ ನೀರು ಸರಬರಾಜು ಮಾಡುತ್ತಿರುವ ಜನರಿಗೆ ಸಂಘಟನೆಯ ಕೆಲಸ ಸಂಜೀವಿನಿಯಾಗಿ ಮಾರ್ಪಟ್ಟಿದೆ. ಈ ಕೆಲಸಕ್ಕೆ ಪ್ರೇರಣೆ ನಮ್ಮ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ಅವರು ಎನ್ನುತ್ತಾರೆ, ಸಂಘಟನೆಯ ಪದಾಧಿಕಾರಿಗಳು.

LEAVE A REPLY

Please enter your comment!
Please enter your name here