ಮುಂಗಾರು ಸಾಂಸ್ಕೃತಿಕ ಹಬ್ಬ

0
175

ರಾಯಚೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮುನ್ನೂರು ಕಾಪು ಬಲಿಜ ಸಮಾಜ ವತಿಯಿಂದ ಹಮ್ಮಿಕೊಂಡ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ನಿಗದಿತ ಇಪ್ಪತ್ತು ನಿಮಿಷದಲ್ಲಿ  ೩೩೯೯ ಅಡಿ ಕಲ್ಲನ್ನು ಎಳೆದು ಬಳ್ಳಾರಿಯ ಶ್ರೀಕಾಕುಳಂ ವೆಂಕಟೇಶ್ವರ ರಾವ್ ಅವರ ಎತ್ತುಗಳು ಮುನ್ನಡೆ ಸಾದಿಸಿವೆ.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೊದಲನೆಯ ದಿನವಾದ ಇಂದು ಒಂದುವರೆ ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ರಾಜ್ಯದ ಒಟ್ಟು ಹದಿಮೂರು ಜೋಡಿ ಎತ್ತುಗಳು ಸ್ಪರ್ಧೆ ಯಲ್ಲಿ ಪಾಲ್ಗೊಂಡಿವೆ

ಒಂದುವರೆ ಟನ್ ಭಾರಬಸದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ನಿಗದಿತ ಇಪ್ಪತ್ತು ನಿಮಿಷದಲ್ಲಿ ೩೩೯೯ ಅಡಿ ಒಂದುವರೆ ಟನ್ ಭಾರದ ಕಲ್ಲು ಎಳೆದ ವೆಂಕಟೇಶ್ವರ ರಾವ್ ರವರ ಎತ್ತುಗಳು ಮುನ್ನಡೆಯಲ್ಲಿವೆ.

ಉಳಿದಂತೆ ನಗರದ ದಾಸರಾಯ್ಯಗಾರು ವಿನೋದ್ ರವರಿಗೆ ಸೇರಿದ ಎತ್ತುಗಳು ೨೩೦೯,ಮಾನವಿಯ ಕಪಗಲ್ ಗ್ರಾಮದ ಶ್ರೀ ಕೃಷ್ಣ ದೇವರಾಯ ಕೊಟ್ಟಪ್ಪ ರವರಿಗೆ ಸೇರಿದ ಎತ್ತುಗಳು ೧೫೩೨, ಮಾನ್ವಿ ತಾಲೂಕಿನ ನೀಲಗಲ್ ಗ್ರಾಮದ ವಿ, ಸೂರಿಬಾಬು ಎನ್ನುವವರಿಗೆ ಸೇರಿದ ಎತ್ತುಗಳು ೧೨೬೮ ಅಡಿ ಭಾರದ ಕಲ್ಲು  ಎಳೆವ ಮೂಲಕ ತೀರ್ವ ಸ್ಪರ್ಧೆಯಲ್ಲಿ ಭಾಗವಹಿಸಿ ಹಿನ್ನಡೆ ಸಾದಿಸಿವೆ.

LEAVE A REPLY

Please enter your comment!
Please enter your name here