ಕೆರೆ ಹೂಳೆತ್ತಲು ಬೇಕಿದೆ 10ಕೋಟಿ !

0
232

ಬಳ್ಳಾರಿ/  ಹೊಸಪೇಟೆ:ಐತಿಹಾಸಿಕ ಪುರಾತನ ಕಮಲಾಪುರ ಕೆರೆಯ ಪ್ರದೇಶದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ಶನಿವಾರ ಸರ್ವೇ ಕಾರ್ಯ ಆರಂಭವಾಗಿದ್ದು, ಕೆರೆಯ ಹೂಳೆತ್ತಲು ಸುಮಾರು 10ಕೋಟಿ ರೂಪಾಯಿ ವಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.
ಕಂದಾಯ, ಭೂ ಮಾಪನ ಹಾಗೂ ನೀರಾವರಿ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ನಡೆಸಿದ ಜಂಟಿ ಸರ್ವೇ ಕಾರ್ಯಚರಣೆಯಲ್ಲಿ ಅಂದಾಜಿಸಲಾಗಿದ್ದು, ಈ ವೆಚ್ಚವನ್ನು ಸರ್ಕಾರ ಬರಿಸುವ ಮೂಲಕ ಮಳೆಗಾಲ ಆರಂಭವಾಗುವ ಮುನ್ನ ಹೂಳೆತ್ತಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಐತಿಹಾಸಿಕ ಕೆರೆ ಅಭಿವೃದ್ಧಿ ಹಾಗೂ ಹೂಳೆತ್ತಲು ಸ್ಥಳೀಯ ಗಂಡುಗಲಿ ಕುಮಾರ ರಾಮ ಯುವಸೇನೆ ಹಾಗೂ ಜನಸಂಗ್ರಾಮ ಪರಿಷತ್ ನೇತೃತ್ವದಲ್ಲಿ ಗ್ರಾಮಸ್ಥರು, ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ಅವರಿಗೆ ಮನವಿ ನೀಡಿ, ಒತ್ತಾಯಿಸಿದ್ದರು. ಮನವಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈಚಗೆ ಕಮಲಾಪುರ ಕೆರೆ ಪ್ರದೇಶಕ್ಕೆ ಬೇಟಿ ನೀಡಿ, ಕೆರೆಯಲ್ಲಿ ಸರ್ವೇಕಾರ್ಯ ನಡೆಸಿ, ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕೆರೆಯಲ್ಲಿ ಸಂಗ್ರಹಗೊಂಡ ಅಷ್ಟೂ ವ್ಯಾಪ್ತಿಯಲ್ಲಿ ಕನಿಷ್ಠ 4 ಅಡಿ ಆಳದ ಹಸಿ ಹೂಳೆತ್ತಲು ಸುಮಾರು 10ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದ್ದು, ವರದಿ ಸಿದ್ಧಪಡಿಸಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.
ಕಂದಾಯ ಇಲಾಖೆಯ ಉಪ ತಹಶಿಲ್ದಾರ ಅಮರನಾಥ, ಕಂದಾಯ ನಿರೀಕ್ಷಕ ಅನಿಲ್ ಕುಮಾರ, ಗ್ರಾಮ ಲೆಕ್ಕಿಗ ರವಿಕುಮಾರ, ಭೂ ಮಾಪನ ಇಲಾಖೆಯ ಅಧಿಕಾರಿ ರಾಘವೇಂದ್ರ, ನೀರಾವರಿ ಇಲಾಖೆಯ ಅಭಿಯಂತರರಾದ ತಿಮ್ಮಪ್ಪ, ಯಲ್ಲಪ್ಪ, ಜನಸಂಗ್ರಾಮ ಪರಿಷತ್ ಮುಖಂಡ ಶಿವಕುಮಾರ ಮಾಳಗಿ, ಗ್ರಾಮದ ಮುಖಂಡರಾದ ಮುಸ್ತಪ್ಪ ನಾಯಕ, ಕುಪೇಂದ್ರ ನಾಯಕ, ಹೀರೆಕೇರಿ ಗಂಗಣ್ಣ, ಅಂಬಣ್ಣ, ವೀರೇಶ್, ಅಂಗಡಿ ನಾಗರಾಜ, ಕೃಷ್ಣಮೂರ್ತಿ, ಇತರರು ಇದ್ದರು.

LEAVE A REPLY

Please enter your comment!
Please enter your name here