ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

0
130

ಬಳ್ಳಾರಿ / ಹೊಸಪೇಟೆ ತಾಲೂಕು ಆಡಳಿತದಿಂದ-4 ಲಕ್ಷ ಪರಿಹಾರ ವಿತರಣೆ

ತಾಲೂಕಿನಲ್ಲಿ ಕಳೆದ ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆ ಗಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ತಾಲೂಕು ಆಡಳಿತದಿಂದ 4 ಲಕ್ಷ ರೂ ಗಳ ಪರಿಹಾರ ವಿತರಿಸಲಾಯಿತು.

ಕಳೆದ ಏಪ್ರೀಲ್ 28 ರಂದು ನಗರದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಬಾರಿ ಗಾಳಿಗೆ ನಗರದ 34ನೇ ವಾರ್ಡಿನ ಊರಮ್ಮನ ಗುಡಿ ಬಳಿಯ ಅಗಸರ ಓಣಿಯಲ್ಲಿ ಜರುಗಿದ ಘಟನೆಯಲ್ಲಿ ಸ್ಥಳೀಯ ನಿವಾಸಿ ಚಿನ್ನ ಮಾರೆಣ್ಣ(75) ಎಂಬುವವರ ಮನೆಯ ಗೋಡೆ ಕುಸಿದು ಚಿನ್ನ ಮಾರೆಣ್ಣ(75) ಮೃತಪಟ್ಟಿದ್ದರು.

ಮೃತ ಕುಟುಂಬಕ್ಕೆ ಸ್ಥಳೀಯ ತಹಸೀಲ್ದಾರರ ಕಛೇರಿಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಮೃತ ವ್ಯಕ್ತಿಯ ಪತ್ನಿ ಪದ್ದಮ್ಮ ರಿಗೆ ರಾಜ್ಯ ಪ್ರಕೃತಿ ಪರಿಹಾರ ನಿಧಿಯಡಿ 4 ಲಕ್ಷ ರೂ ಗಳ ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಹೆಚ್.ವಿಶ್ವನಾಥ, ಪ್ರಕೃತಿ ವಿಕೋಪದಿಂದ ಸಂಭವಿಸಿದ ದುರಂತದಲ್ಲಿ ನಗರದ ನಿವಾಸಿ ಚಿನ್ನ ಮಾರೆಣ್ಣ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಮೃತ ವ್ಯಕ್ತಿಯ ಪತ್ನಿಗೆ ತಾಲೂಕು ಆಡಳಿತದಿಂದ 4 ಲಕ್ಷ ರೂ ಗಳ ಪರಿಹಾರದ ಚೆಕ್ ನ್ನು ಪ್ರಕೃತಿ ವಿಕೋಪನಿಧಿಯಡಿ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎನ್.ಅಬ್ದುಲ್ ಖದೀರ್, ನಗರಸಭೆ ಸದಸ್ಯರಾದ ಗುಜ್ಜಲ ನಿಂಗಪ್ಪ, ರೂಪೇಶ್ ಕುಮಾರ್, ಮುಖಂಡರಾದ ಧರ್ಮೇಂದ್ರ ಸಿಂಗ್, ಶ್ರೀಕಂಠ, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ, ಮದನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here