ಮಾರುಹೋದ ಹವ್ಯಾಸಿ ಛಾಯಗ್ರಾಹಕರು,

0
210

ಬಳ್ಳಾರಿ /ಹೊಸಪೇಟೆ:ಮಲಿಯಾಳಂ ಚಲಚಿತ್ರಯೊಂದರಲ್ಲಿ ಸೆರೆಯಾದ ಹಂಪಿಯ ಮನಮೋಹಕ ದೃಶ್ಯಗಳಿಗೆ ಮಾರುಹೋದ ಕೇರಳದ ಹವ್ಯಾಸಿ ಛಾಯಗ್ರಾಹಕರು, ವಿಶ್ವಪ್ರಸಿದ್ಧ ಹಂಪಿಯ ಮುಖ ಮಾಡಿದ್ದು, ಹಂಪಿಯ ಪ್ರಮುಖ ಪ್ರದೇಶಗಳ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು, ಸಂಭ್ರಮಿಸುತ್ತಿದ್ದಾರೆ.

ಕಳೆದ 2015ರಲ್ಲಿ ಹಂಪಿಯಲ್ಲಿ ಚಿತ್ರೀಕರಣಗೊಂಡ ಆನಂದಂ ಎಂಬ ಮಲಿಯಾಳಿ ಚಿತ್ರದಲ್ಲಿ ಸೆರೆ ಹಿಡಿಯಲಾದ ಹಂಪಿಯ ಮನಮೋಹಕ ದೃಶ್ಯಗಳಿಗೆ ಮನಸೋತ ಹತ್ತಾರು ಜನರ ಹವ್ಯಾಸಿ ಛಾಯಗ್ರಾಹಕರ ತಂಡ, ದುಬಾರಿ ಬೆಲೆ ಬಾಳುವ ಕ್ಯಾಮರಾದಲ್ಲಿ ಹಂಪಿಯ ಪ್ರಮುಖ ಸ್ಮಾರಕಳನ್ನು ಸೆರೆ ಹಿಡಿಯುವ ದೃಶ್ಯ ಗುರುವಾರ ಕಂಡು ಬಂದಿತು.

ಕಣ್ಣಿ ಹಾಗೂ ದಿಲೀಶ್ ಎಂಬ ಛಾಯಗ್ರಾಹಕರ ನೇತೃತ್ವದಲ್ಲಿ ಹಂಪಿಗೆ ಬೇಟಿ ನೀಡಿದ ಯುವ ಛಾಯಗ್ರಾಹಕರ ತಂಡ, ಹೇಮಕೂಟ ಪ್ರದೇಶದಲ್ಲಿ ಬೀಡು ಬಿಟ್ಟು, ಸೂರ್ಯಸ್ತದ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದಾರೆ. ಇಲ್ಲಿನ ಪ್ರಸಿದ್ಧ ಸ್ಮಾರಕಗಳು ಸೇರಿದಂತೆ ನದಿ ತೀರ, ಬೆಟ್ಟ-ಗುಡ್ಡ, ಬೃಹತ್ ಕಲ್ಲು ಬಂಡೆಗಳ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಖಷಿ ಅನುಭವಿಸುತ್ತಿದ್ದಾರೆ. ಮತ್ತೂ ಪೇಸ್‌ಬುಕ್,ಯುಟ್ಯೂಬ್ ಹಾಗೂ ವಾಟ್ಸಫ್‌ನಲ್ಲಿ ಆಫ್ಲೋಡ್ ಮಾಡುವ ಮೂಲಕ ತಮ್ಮ ಬಂಧು-ಮಿತ್ರರಿಗೆ ಪೋಸ್ಟ್ ಮಾಡುತ್ತಿದ್ದಾರೆ.

ಇತ್ತೀಚಿಗೆ ಸ್ಥಳೀಯ ಹವ್ಯಾಸಿ ಛಾಯಗ್ರಾಹಕರು, ಹಂಪಿಯ ಸುಂದರ ದೇವಾಲಯ, ಶಿಲ್ಪಗಳನ್ನು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿ, ಪೇಸ್‌ಬುಕ್,ಯುಟ್ಯೂಬ್ ಹಾಗೂ ವಾಟ್ಸಫ್‌ನಲ್ಲಿ ಆಫ್ಲೋಡ್ ಮಾಡಿ, ಇತರರಿಗೆ ಹಂಚಿಕೆ ಕೊಳ್ಳುವ ಸಂಸ್ಕೃತಿ ಹೆಚ್ಚಾಗಿರುವ ಪರಿಣಾಮವಾಗಿ, ಹಂಪಿ ಪ್ರದೇಶ ಮತ್ತಷ್ಟು ಆಕರ್ಷಣೆಗೆ ಒಳಗಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಹಂಪಿಯ ಕಡೆ ಮುಖ ಮಾಡುತ್ತಿದ್ದಾರೆ. ಎಂದು ಹಂಪಿಯ ಮಾರ್ಗದರ್ಶಕರು, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here