ಮಳೆಯಿಂದ ಹೂಳೆತ್ತುವ ಕಾರ್ಯಕ್ಕೆ ಅಡಚಣೆ

0
217

ಬಳ್ಳಾರಿ /ಹೊಸಪೇಟೆ: ಮಠಾಧೀಶರ ಧರ್ಮಪರಿಷತ್ ನೇತೃತ್ವದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಜಿಲ್ಲೆಯ ರೈತರು, ಎಡಬಿಡದೇ ನಡೆಸುತ್ತಿರುವ ಹೂಳೆತ್ತುವ ಕಾರ್ಯ ಬುಧವಾರ ಮಂದಗತಿಯಲ್ಲಿ ಸಾಗಿದೆ.ಮಂಗಳವಾರ ಸಂಜೆ ಸುರಿದ ಮಳೆಯಿಂದಾಗಿ ಹೂಳಿನ ಪ್ರದೇಶದಲ್ಲಿ ಭೂಮಿ ಹಸಿಯಾಗಿ, ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳು  ಕೆಸರಿನ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡ ಪರಿಣಾಮವಾಗಿ ಕಳೆದ 20 ದಿನಗಳಿಂದ ಚುರುಕಿನಿಂದ ಸಾಗಿದ್ದ ಹೂಳೆತ್ತುವ ಕಾರ್ಯ ಕ್ಷೀಣವಾಗಿದೆ.ಹೊಸಪೇಟೆ ಮಾರ್ಗವಾಗಿ ಜಲಾಶಯದ ಹಿನ್ನೀರಿನ ಪ್ರದೇಶ ಹಾಗೂ ಬಿಎಂಎಂ ಕಾರ್ಖಾನೆ ಭಾಗದಿಂದ ತೆರಳು ಮಾರ್ಗದಲ್ಲಿ ವಾಹನಗಳು ಸಿಲುಕಿ ಹಾಕಿಕೊಂಡು ಅಡಚಣೆ ಉಂಟಾಗಿದೆ. ಇದರ ನಡುವೆಯೂ 27 ಟ್ರ್ಯಾಕ್ಟರ್, 4 ಟಿಪ್ಪರ್ 1 ಹಿಟಾಚಿ ಹಾಗೂ 1 ಜೇಸಿಬಿ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಹೂಳನ್ನು ಸಾಗಿಸಲಾಯಿತು. ಇನ್ನುಳಿದ ಜೇಸಿಬಿ ಹಿಟಾಚಿಗಳು ಮಣ್ಣೆತ್ತುವ ಕಾರ್ಯವಿಲ್ಲದೇ ಸ್ತಬ್ಧವಾಗಿದ್ದವು. ಮಂಗಳವಾರ  4 ಹಿಟಾಚಿ, 3 ಜೇಸಿಬಿ, 60 ಟಿಪ್ಪರ್,ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಹೂಳನ್ನು ಸಾಗಿಸಲಾಗಿತ್ತು. ಮಳೆಯಿಂದ ಹೂಳೆತ್ತುವ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.ದೇಣಿಗೆ:ಸಿರುಗುಪ್ಪ ತಾಲ್ಲೂಕಿನ ಶಿರಗೇರಿ ಗ್ರಾಮದ ಗೋಡೆ ಸಂಪತ್ತು, ಏಳುಬೆಂಚಿ ವೀರನಗೌಡ, ಕೆರೆ ತಕಳ ವೀರನಗೌಡ ಹಾಗೂ ಕೆರೆತಕಳ ರಾಮನಗೌಡ ತಲಾ 5ಸಾವಿರ ದೇಣಿಗೆ ನೀಡಿದ್ದು, ಒಟ್ಟು 20ಸಾವಿರ ದೇಣಿಗೆ ಸಂಗ್ರಹವಾಗಿದೆ ಎಂದು ರೈತ ಮುಖಂಡ ದರೂರು ಪುರಷೋತ್ತಮಗೌಡ ತಿಳಿಸಿದ್ದಾರೆ.ಕಮಲಾಪುರ ಕೆರೆ:ಕಳೆದ ತಿಂಗಳಿಂದ ಆರಂಭವಾಗಿದ್ದ ಕಮಲಾಪುರ ಕೆರೆ ಹೂಳೆತ್ತುವ ಕಾರ್ಯ ಮಂಗಳವಾರ ಸಂಜೆ ಸುರಿದ ಮಳೆಯಿಂದಾಗಿ, ಸ್ವಲ್ಪ ಮಟ್ಟಿಗೆ ಅಡಚಣೆ ಉಂಟಾಗಿದ್ದು, ಪುನಃ ಮದ್ಯಾನ್ಹದಿಂದ ಹೂಳೆತ್ತುವ ಕಾರ್ಯ ಸಾಗಿದೆ. ಕೆರೆ ಅಂಗಳದಲ್ಲಿ ಸಸಿ ನಡೆಲು 50ಹೆಚ್ಚು ಕಾರ್ಮಿಕರು, ಗುಂಡಿ ತೋಡುವ ಕೆಲಸದಲ್ಲಿ ನಿರತವಾಗಿದ್ದು, ಗುಂಡಿಗಳಲ್ಲಿ ಸಸಿ ನಡಲಾಗುವುದು. ಈವರಗೆ ಕೆರೆ ಅಂಗಳದಲ್ಲಿ ಅಪಾರ ಪ್ರಮಾಣದ ಹೂಳು ಖಾಲಿಯಾಗಿದ್ದು, ಕೆರೆಯ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜನಸಂಗ್ರಾಮ್ ಪರಿಷತ್ ಮುಖಂಡ ಶಿವಕುಮಾರ ಮಾಳಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here