ಅಬಕಾರಿ ಅಧಿಕಾರಿಗಳ ದಾಳಿ.ಅಕ್ರಮ ಮದ್ಯ ವಶ

0
266

ಬಳ್ಳಾರಿ / ಹೊಸಪೇಟೆ: ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿಯ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ರಾಜ್ಯ ವಿಚಕ್ಷಣ ದಳದ ಅಧಿಕಾರಿಗಳು, ಇಬ್ಬರನ್ನು ಬಂಧಿಸಿ, 10ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಗೋವಾದಿಂದ ಅಕ್ರಮ ಮಧ್ಯವನ್ನು ಲಾರಿಯಲ್ಲಿ ಹೊತ್ತೊಯ್ಯುತ್ತಿದ್ದ ಮಧ್ಯಪ್ರದೇಶ ಮೂಲದ ಲಾರಿ ಚಾಲಕ ಕುಲಬೀರ್ ಸಿಂಗ್ (64) ಕ್ಲೀನರ್ ಪ್ರದೀಪ್ (35) ಎಂಬ ಇಬರನ್ನು ಬಂಧಿಸಿರುವ ಅಬಕಾರಿ ಪೊಲೀಸರು, ಲಾರಿಯಲ್ಲಿದ್ದ ಸುಮಾರು 850ಕ್ಕೂ ಆಧಿಕ ಮದ್ಯದ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಜಂಟಿ ಆಯಕ್ತ ಸೋಮಶೇಖರಪ್ಪ ಅಧೀಕ್ಷಕ ಮಂಜುನಾಥ ಮಾರ್ಗದರ್ಶನ ಮೇರೆಗೆ ಅಬಕಾರಿ ನಿರೀಕ್ಷಕ ವಾಸದೇವ ನೇತೃತ್ವದ ತಂಡ, ಗೋವಾದಿಂದ ಹಣ್ಣು ತುಂಬಿದ ಬರುತ್ತಿರುವಂತೆ ಕಂಡು ಬರುತ್ತಿದ್ದ ಲಾರಿಯನ್ನು ಅಬಕಾರಿ ವಿಚಕ್ಷಣ ದಳ, ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯ ಶನೇಶ್ವರ ದೇವಸ್ಥಾನದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಕಾದು ಕುಳಿತು, ಲಾರಿಯ ಮೇಲೆ ದಾಳಿ ನಡೆಸಿದೆ. ಅಬಕಾರಿ ನಿರೀಕ್ಷಕ ಷಣ್ಮುಘನಾಥ, ರವೀನ್, ಅಕ್ಬರ್ ಸೇರಿದಂತೆ ಇತರರು ದಾಳಿ ನಡೆಸಿದ್ದರು. ಲಾರಿಮತ್ತು ಮದ್ಯ ಸೇರಿ ಒಟ್ಟು ಮೌಲ್ಯ 30ಲಕ್ಷಕ್ಕೂ ಆಧಿಕವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here