ಯಡಿಯೂರಪ್ಪ ನಾನು ಇಂಡಿಯಾ ಪಾಕಿಸ್ತಾನ ಅಲ್ಲ ಎಂದ ಈಶ್ವರಪ್ಪ

0
304

ಬಳ್ಳಾರಿ: ೧೮ ರಿಂದ ರಾಜ್ಯದಲ್ಲಿ ಬಿಜೆಪಿ ವಿವಿಧ ತಂಡಗಳಿಂದ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದೇವೆ. ಕೇಂದ್ರದಿಂದ ಬಿಡುಗಡೆ ಯಾದ ಬರಗಾಲದ ಅನುದಾನವನ್ನ ರಾಜ್ಯ ಸರ್ಕಾರ ಇನ್ನೂ ಖರ್ಚು ಮಾಡಿಲ್ಲ. ೯೦೦ ಕೋಟಿ ಹಣ ರಾಜ್ಯ ಸರ್ಕಾರದ ಬಳಿ ಇದೆ. ರಾಜ್ಯದ ಇತಿಹಾಸದಲ್ಲಿಯೇ ಬರಗಾಲದ ಅನುದಾನವನ್ನ ಅತಿ ಹೆಚ್ವು ನೀಡಿದ್ದು ಕೇಂದ್ರದ ಬಿಜೆಪಿ ಸರ್ಕಾರ. ಈ ಬಗ್ಗೆ ಸಿದ್ದ ರಾಮಯ್ಯ ಶ್ವೇತ ಪತ್ರ ಹೊರಡಿಸಲಿ. ಜಿಲ್ಲಾ ಉಸ್ತುವಾರಿ ಸಚಿವರು,ಅಧಿಕಾರಿಗಳು ಜಿಲ್ಲೆಗೆ ತೆರಳುತ್ತಿಲ್ಲ. ಮುಖ್ಯ ಮಂತ್ರಿಗಳ ಮಾತು ಯಾರೂ ಕೇಳುತ್ತಿಲ್ಲ. ಬರಗಾಲ ಕುರಿತು ರಾಜ್ಯ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟು ಗೋಶಾಲೆ, ಮೇವು ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ ಅನ್ನೋ ಮಾಹಿತಿ ಬಹಿರಂಗ ಪಡಿಸಲಿ.  ಗುಂಡ್ಲುಪೇಟೆ, ಚಾಮರಾಜನಗರ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ವಿಪಕ್ಷಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನ ಮುಖ್ಯಮಂತ್ರಿ ಗಳು ನಿಲ್ಲಿಸಬೇಕು.

ಯಡಿಯೂರಪ್ಪ ನಾನು ಹಿಂದೂಸ್ತಾನ್ ಪಾಕಿಸ್ತಾನ ಅಲ್ಲ. ನಾವು ಒಟ್ಟಿಗೆ ಇದ್ದೇವೆ.ಬಳ್ಳಾರಿ ಯಲ್ಲಿ ವಿಪಕ್ಷ ನಾಯಕ ಕೆ,ಎಸ್,ಈಶ್ವರಪ್ಪ ಹೇಳಿಕೆ. ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ನಾವು ಒಟ್ಟಿಗೆ ಇದ್ದಿದ್ದೇವೆ, ಯಾವುದೇ ಗೊಂದಲ ಬೇಡ.ರಾಯಣ್ಣ ಬ್ರಿಗೇಡ್ ಚಟುವಟಿಕೆ ತನ್ನಷ್ಟಕ್ಕೆ ತಾನೇ ಮುಂದುವರಿಯುತ್ತೆ. ರಾಜ್ಯದಲ್ಲಿನ ಭೀಕರ ಬರಗಾಲ ಕುರಿತು ಕಾರ್ಯಕಾರಿಣಿಯಲ್ಲಿ ವಿಷಯ ಮಂಡಿಸಿದ್ದೇನೆ.

 ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ. ಈಶ್ವರಪ್ಪಗೆ ಬರ ಅಂದ್ರೆ ಏನು ಅಂತಾ ಗೊತ್ತಿಲ್ಲ ಅನ್ನೋ ಮುಖ್ಯಮಂತ್ರಿ ಗಳ ಹೇಳಿಕೆ ನೋವು ತಂದಿದೆ. ಬಳ್ಳಾರಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸಂಸದ ಶ್ರೀರಾಮುಲು ಕಾಂಗ್ರೆಸ್ ಅಭ್ಯರ್ಥಿ ಗೆ ಮತ ನೀಡಿದ ವಿಚಾರ. ಬಳ್ಳಾರಿ ಯಲ್ಲಿ ಕೆಎಸ್ ಈಶ್ವರಪ್ಪ ಹೇಳಿಕೆ.

ಬಿಜೆಪಿ ಅಭ್ಯರ್ಥಿ ಇರಲಿಲ್ಲ ರಾಮುಲು ಯ್ಯಾವ ಕಾರಣಕ್ಕಾಗಿ ಮತ ನೀಡಿದ್ದಾರೆ ಗೊತ್ತಿಲ್ಲ. ಕಾರ್ಯಕಾರಿಣಿ ವೇಳೆ ಈ ಬಗ್ಗೆ ರಾಮುಲು ಜೊತೆ ಚರ್ಚೆ ಮಾಡ್ಬೇಕು ಅಂತಾ ನಿರ್ಧರಿಸಿದ್ದೆ. ಆದ್ರೆ ರಾಮುಲು ಕಾರ್ಯಕಾರಿಣಿಗೆ ಹಾಜರಾಗಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಸಂದರ್ಭದಲ್ಲಿ ಶ್ರೀರಾಮುಲು ಯಾಕೆ ಮತ ನೀಡಿದ್ದಾರೆ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಉತ್ತರಿಸುವೆ.

LEAVE A REPLY

Please enter your comment!
Please enter your name here