ಬಸ್ ನಲ್ಲೇ ಜೀವ ಬಿಟ್ಟ ವೃದ್ಧೆ….

0
231

ಹೊಸಪೇಟೆ/ಬಳ್ಳಾರಿ:ಕೆಎಸ್ಆರಟಿಸಿ ಬಸ್ನಲ್ಲಿ ತೆರಳುತ್ತಿದ್ದ ವೃದ್ಧ ಮಹಿಳೆಯೊಬ್ಬಳು ಕಂಪ್ಲಿ ರಸ್ತೆ ಮಧ್ಯದ ಬಸ್ ನಲ್ಲಿ ಜೀವ ಬಿಟ್ಟ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಂಪ್ಲಿಯಲ್ಲಿ ಗಂಗಾವತಿಯಿಂದ ಬಳ್ಳಾರಿಗೆ ತೆರಳುವ ವೇಳೆ ಜರುಗಿದೆ. ಕುರುಗೋಡಿನ ಗೆಣಿಕೆಹಾಳ್ ರಸ್ತೆ 9ನೇ ವಾರ್ಡಿನ ಇಂದಿರಾನಗರದ ಮೂಲ ನಿವಾಸಿಯಾದ ದೊಡ್ಡ ಬಸಪ್ಪ ಎಂಬುವರ ಪತ್ನಿ ನೀಲಮ್ಮ (61) ಎಂಬ ವೃದ್ಧ ಮಹಿಳೆ ಗಂಗಾವತಿಯಿಂದ ಕುರುಗೋಡಿಗೆ ಪ್ರಯಾಣಿಸಲು ಗಂಗಾವತಿ ಬಳ್ಳಾರಿ ಬಸ್ಸಿಗೆ ತೆರಳಿದ್ದಾಳೆ. ನೀಲಮ್ಮ ಎಂಬ ಮಹಿಳೆ ಗಂಗಾವತಿ ಅವರ ಸಂಬಂಧಿಕ ಬಸ್ ನಲ್ಲಿ ಕೂರಿಸಿ ಹೋಗಿದ್ದಾನೆ. ನಂತರ ಗಂಗಾವತಿಯಿಂದ ಬಳ್ಳಾರಿಗೆ ತೆರಳುವ ಸಾರಿಗೆ ಬಸನಲ್ಲಿ ಕಂಪ್ಲಿಗೆ ತೆರಳುವ ರಸ್ತೆ ಮಧ್ಯದಲ್ಲಿ ಏಕಾಏಕಿ ಬಸ್ ನಲ್ಲಿ ಮೃತಪಟ್ಟ ಘಟನೆ ಜರುಗಿದೆ. ಮೃತ ದೇಹವು ಬಸ್ ನಲ್ಲಿ ಇರುವುದರಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಬಸ್ನಿಂದ ಕೆಳಗಿಳಿದಿದ್ದಾರೆ. ನಂತರ ಬಸ್ ಚಾಲಕ ನಿರ್ವಾಹಕರು ಕಂಪ್ಲಿ ಪೊಲೀಸರಿಗೆ ಮಾಹಿತಿ ತಿಳಿಸಿದ ನಂತರ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದಿದ್ದಾರೆ .

LEAVE A REPLY

Please enter your comment!
Please enter your name here