ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ….

0
196

ಬಳ್ಳಾರಿ:ಹಳೇ ಬಸ್ ನಿಲ್ದಾಣದಲ್ಲಿ ಕಳ್ಳತನದ ಹಾವಳಿ-ರೈತರನ್ನೂ ಬಿಡದ ಖದೀಮರು-ಕರೂರು ಗ್ರಾಮದ 20 ಕ್ಕೂ ಹೆಚ್ಚು ರೈತರ ಹಣ ಕಳ್ಳತನ-ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಳ್ಳಾರಿಯ ಹಳೆ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮಿತಿ ಮೀರಿದೆ. ಪೊಲೀಸರ ಕಾವಲು ಇದ್ದರೂ ಸಹ ಕಳೆದ ಮೂರು ತಿಂಗಳಿಂದ ಕಳ್ಳತನ ಹಾಗೆಯೇ ಮುಂದುವರಿದಿದೆ. ಕಳೆದ ನಾಲ್ಕು ದಿನದ ಹಿಂದೆ ಕರೂರು ಗ್ರಾಮದ ರೈತ ರಾಮನಗೌಡ ಅವರು ಕೆಲಸದ ನಿಮಿತ್ತ ಬಳ್ಳಾರಿ ನಗರಕ್ಕೆ ಆಗಮಿಸಿದ್ರು. ಇಲ್ಲಿನ ಹಳೆಯ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ನಿಂತಿರುವಾಗ ಜೇಬು ಕತ್ತರಿಸಿ ಮೂವತ್ತೆಂಟು ಸಾವಿರ ರೂಪಾಯಿ ಲಪಟಾಯಿಸಿದ್ದಾರೆ. ಅದೇರೀತಿ, ತಮ್ಮದೇ ಗ್ರಾಮದ 20ಕ್ಕೂ ಹೆಚ್ಚು ರೈತರಿಗೆ ಇದೇ ಅನುಭವ ಆಗಿದೆ. ಉಳಿದ ಪ್ರಯಾಣಿಕರಿಗೂ ಸಹ ಇದೇ ಪರಿಸ್ಥಿತಿ ಇದೆ. ‌ಪೊಲೀಸರು ಇದ್ದರೂ ಇಲ್ಲದಂಥ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಬೇಕು ಅಂತ ರೈತರು ಆಗ್ರಹಿಸಿದ್ದಾರೆ.
ಅಲ್ಲದೆ, ಹಣ ಕಳೆದುಕೊಂಡ ರೈತ ರಾಮನಗೌಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಳೆದ ಹಣ ವಾಪಸ್ಸು ಹುಡುಕಿ ಕೊಡುವಂತೆ ಒತ್ತಾಯಿಸಿದ್ದಾರೆ.

ಬೈಟ್: ೧) ರಾಮನಗೌಡ, ಹ ಕಳೆದುಕೊಂಡ ರೈತ.

ಬೈಟ್: ೨) ಪುರುಷೋತ್ತಮಗೌಡ ದರೂರು,

LEAVE A REPLY

Please enter your comment!
Please enter your name here