ಬಸ್ ಪಾಸ್ ಇದ್ರೂ …. ತಪ್ಪದ ಖಾಸಗಿ ಬಸ್ ಪ್ರಯಾಣ

0
142

ತುಮಕೂರು: ಇಡೀ ವಷ೯ ಸಕಾ೯ರಿ ಬಸ್ ನಲ್ಲಿ ಪ್ರಯಾಣ ಮಾಡಿ ಶಾಲೆ ಕಾಲೇಜುಗಳಿಗೆ ತುಮಕೂರು ನಗರಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿಗಳ ಕಮಿಷನ್ ದಂದೆಗೆ ಕಾಸು ಕೊಟ್ಟು ಖಾಸಗಿ ಬಸ್ ನಲ್ಲಿ ಪ್ರಯಾಣಿಸುವ ದುರಂತ ಕೊರಟಗೆರೆ ತಾಲ್ಲೂಕಿನ ಶಾಲಾ ಕಾಲೇಜು ಮಕ್ಕಳ ಆಥಿ೯ಕ ದುಸ್ತಿತಿಗೆ ಕೊಂಡೊಯ್ದಿದೆ.
ವಾ/ಒ೧
ಕೊರಟಗೆರೆ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ೬ ರಿಂದ ೧೦ ಗಂಟೆವರೆಗೆ ಒಂದೆ ಒಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುವುದಿಲ್ಲ ಇನ್ನು ಬೆಂಗಳೂರು ಮತ್ತು ಜಿಲ್ಲಾ ಕೇಂದ್ರ ತುಮಕೂರು ನಗರ ಸೇರಿದಂತೆ ಇನ್ನಿತರೆಡೆ ಹಾಗು ಮಧುಗಿರಿ ಪಾವಗಡ ಹಾಗು ಗೌರಿಬಿದನೂರು ಕಡೆ ಪ್ರಯಾಣಿಸುವ ಪ್ರಯಾಣಿಕರಿಗೆ ಪರದಾಟ ತಪ್ಪಿಲ್ಲ .
ಇಲ್ಲಿ ಹೇಳೊರು ಕೇಳೊರು ಯಾರೂ ಇಲ್ಲ.ರಿಯಾಯಿತಿ ದರದ ವರ್ಷದ ಪಾಸು ಮಾಡಿಸಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಿಂಸೆ ತಪ್ಪಿಲ್ಲ.
ಇದರ ಲಾಭ ಗಳಿಸುವಲ್ಲಿ ಖಾಸಗಿ ಬಸ್ ಗಳು ಮತ್ತು ಆಟೊ ರಿಕ್ಷಾಗಳು ಪಡೆದು ಕೊಳ್ಳುತ್ತಿವೆ.
ಇನ್ನೂ ಗ್ರಾಮಾಂತರ ಸಾರಿಗೆ ಬಸ್ ಇದ್ದು ಪ್ರಯೊಜನ ಇಲ್ಲ ಎಲ್ಲಿ ಅಂದರೆ ಅಲ್ಲೇ ಕೆಟ್ಟು ನಿಲ್ಲುತ್ತವೆ.
ಕಮಿಷನ್ ಆಸೆಗೆ ಮೊದಲು ಖಾಸಗೀ ಬಸ್ಗಳನ್ನೆ ಮುಂದೆ ಕಳಿಸಿ ಸಕಾ೯ರಿ ಬಸ್ಗೆ ಹತ್ತುವ ಪ್ರಯಾಣಿಕರು ವಿದಿ ಇಲ್ದೆ ಖಾಸಗಿ ಬಸ್ ಗಳಿಗೆ ಹತ್ತಿ ಪ್ರಯಾಣಿಸುವ ಪರಿಸ್ಥಿತಿ ನಿಮಾ೯ಣ ಮಾಡುತ್ತಾರೆ ಎಂಬ ಆರೋಪ ದಟ್ಟವಾಗಿ ಹಬ್ಬಿವೆ.
ಇದು ಇಲಾಖೆಯ ಅಧಿಕಾರಿಗಳ ನಿಲ೯ಕ್ಷ ಭ್ರಷ್ಟಾಚಾರ ಮಾಡುತ್ತಿರುವ ಗಂಭೀರ ಆರೋಪ ಕೂಡಾ ಕೇಳಿ ಬರುತ್ತಿವೆ.ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚೆತ್ತು ಕೊಳ್ಳದೆ ಹೋದರೆ ಪ್ರಯಾಣಿಕರು ಮತ್ತು ನಾಗರಿಕರು ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

 

ವರದಿ: ವಿಬಿ

LEAVE A REPLY

Please enter your comment!
Please enter your name here