ಬಸ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ,ಸವಾರ ಸ್ಥಳದಲ್ಲೇ ಸಾವು..

0
106

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಬೆಂಗಳೂರಿನ ರಸ್ತೆಯ ಹೆದ್ದಾರಿಯ ಕೊಂಗನಹಳ್ಳಿ ಗ್ರಾಮದ ಗೇಟ್ ಬಳಿ ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್ ಮತ್ತು ಯೂನಿಕಾರ್ನ್ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಬೈಕ್ ಸವಾರ ಸ್ಥಳದಲ್ಲೇ ಸಾವುನಪ್ಪಿರುವ ಘಟನೆ ನಡೆದಿದೆ.ಇವನ್ನೂ ಮದನಪಲ್ಲಿ ನಿವಾಸಿ ರಾಜ್ ಕುಮಾರ್ 24 ವರ್ಷ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.ಬೆಂಗಳೂರಿನ ಇಂದಿರಾ ನಗರದಲ್ಲಿರುವ ಡಸ್ಟರ್ ಟೋಟಲ್ ಸಲ್ಯೂಷನ್ ಸರ್ವಿಸಸ್ ಪ್ರೈ.ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಅವರ ಮನೆಯವರಿಂದ ತಿಳಿದುಬಂದಿದೆ.ಮದನಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ ದ್ವಿಚಕ್ರ ವಾಹನ ಕೊಂಗನಹಳ್ಳಿ ಗ್ರಾಮದ ಬಳಿ ಅತಿ ವೇಗವಾಗಿ ಬೆಂಗಳೂರಿ ನಿಂದ ಚಿಂತಾಮಣಿ ಕಡೆಗೆ ಚಲಿಸುವಸುತ್ತಿರುವ ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸುದ್ದಿ ತಿಳಿದ ತಕ್ಷಣವೇ ಕೈವಾರ ಗ್ರಾಮದ ಹೊರ ಠಾಣೆಯ ಪೊಲೀಸ್ ಎ ಎಸ್ ಲಕ್ಷ್ಮಿನಾರಾಯಣ್ ರವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮುಂದಿನ ಕ್ರಮಕೈಗೂಂಡಿದ್ದಾರೆ.ಮೃತ ದೆಹವನ್ನು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ .

LEAVE A REPLY

Please enter your comment!
Please enter your name here