ಬಹಿಷ್ಕಾರ…ಕಾಟಾಚಾರದ ಕಾರ್ಯಕ್ರಮಕ್ಕೆ..!?

0
47

ಚಿಕ್ಕಬಳ್ಳಾಪುರ/ ಚಿಂತಾಮಣಿ :ತಾಲೂಕಿನ ಜಾಮಿಯಾ ಮಸೀದಿಯ ಅಧ್ಯಕ್ಷ ಮೂನ್ ಸ್ಟಾರ್ ಗೌಸ್ ತಮ್ಮ ಕಚೇರಿಯಲ್ಲಿ ಟಿಪ್ಪು ಜಯಂತಿಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು .

ಸುದ್ದಿಗೋಷ್ಠಿ ಮಾತನಾಡಿದ ಅಧ್ಯಕ್ಷರು ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಅದ್ದೂರಿಯಾಗಿ ಮಾಡಲು ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವು ಚಿಂತಾಮಣಿ ತಾಲೂಕಿನಲ್ಲಿ ಹಿಂದೂ ಮುಸ್ಲಿಂ ಭಾವಕ್ಯತೆ ಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲು ಸಿದ್ಧರಿದ್ದೆವು ಆದರೆ ನಮಗೆ ಸುಮಾರು ಐದು ರಿಂದ ಆರು ಸಾವಿರ ವರೆಗೂ ಸೇರುವ ಜನಗಳಿಗೆ ಆಸನ ವ್ಯವಸ್ಥೆ ಮಾಡಲಾಗದೆ ಕೇವಲ ಕಾಟಾಚಾರಕ್ಕೆ ಕಾರ್ಯಕ್ರಮಮಾಡಿದ ಕಾರಣ ಕಾರ್ಯಕ್ರಮಕ್ಕೆ ಬಹಿಷ್ಕಾರ ಮಾಡಿದ್ದೇವೆ ಹೊರತು ಜಯಂತೋತ್ಸವನ್ನು ವಿರೋಧ ಮಾಡಿಲ್ಲ ಎಂದು ಹೇಳಿದ್ದಾರೆ.

ನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗಿದೆ. ಮುಸ್ಲಿಂ ಸಮುದಾಯದವರು ಕಾರ್ಯಕ್ರಮಕ್ಕೆ ಭಾಗವಹಿಸಿಲ್ಲ ಹಾಗಾಗಿ ನಮ್ಮಿಂದ ಟಿಪ್ಪು ಜಯಂತಿಗೆ ವಿರೋಧವಿಲ್ಲ ಕಾಟಾಚಾರದ‌ ಆಚರಣೆಗೆ ಬಹಿಷ್ಕಾರ ಹಾಕಿದ್ದೇವೆ ಎಂದರು.

LEAVE A REPLY

Please enter your comment!
Please enter your name here