ಬಹುತೇಕ ಬಂದ್ ಯಶಸ್ವಿ..

0
396

ಬೀದರ್/ಬಸವಕಲ್ಯಾಣ:ವಿಜಯಪುರದ ದಲಿತ ವಿಧ್ಯಾರ್ಥಿನಿಳ ದಾನಮ್ಮ ಕೊಲೆ ಪ್ರಕರಣ. ಮಹಾರಾಷ್ಟ್ರದ ಕೊರೆಗಾಂವ್ನಲ್ಲಿ ಮೇಲಿನ ಘಟನೆ ಸೇರಿದಂತೆ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಬಸವಕಲ್ಯಾಣದಲ್ಲಿ ವಿವಿಧ ದಲಿತಪರ ಸಂಘಟನೆಗಳು ನೀಡಿದ ಬಂದ್ ಕರೆ ಶಾಂತವಾಗಿ ಜರುಗಿತು.ಭಾರತೀಯ ದಲಿತ ಪ್ಯಾಂಥರ್ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಆಶ್ರಯದಲ್ಲಿ ನೀಡಿದ ಬಂದ್ ಕರೆಗೆ ಬೆಂಬಲಸಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಂದ್ ಆಚರಿಸಲಾಯಿತು.ಬಂದ್ ಹಿನ್ನೆಲೆಯಲ್ಲಿ ನಗರದ ಎಲ್ಲಾ ಶಾಲೆ, ಕಾಲೇಜುಗಳು, ಸರ್ಕಾರಿ ಕಚೇರಿಗಳು ರಜೆ ಘೋಷಿಸಿದವು.ಸರ್ಕಾರಿ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಸ್ಥಿಗಿತಗೊಂಡಿದ್ದವು.

ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂಐಎಂ ಸೇರಿದಂತೆ ಕೆಲ ಮುಸ್ಲಿಂ ಪರ ಸಂಘಟನೆಗಳು ಬಂದ್ಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದವು.ರಾಜ್ಯ ಹಾಗೂ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಒಕ್ಕೊರಲಿನಿಂದ ಖಂಡಿಸಲಾಯಿತು.

LEAVE A REPLY

Please enter your comment!
Please enter your name here