ಬಾರಿ ಮಳೆಗೆ ಮನೆಯ ಗೋಡೆ ಕುಸಿತ..

0
163

ಮಂಡ್ಯ/ಮಳವಳ್ಳಿ:ಕಳೆದ ರಾತ್ರಿ ಬಿದ್ದ ಬಾರಿ ಮಳೆಯಿಂದ ಮನೆಯ ಗೋಡೆ ಕುಸಿತದಿಂದ 5 ಮೇಕೆಗಳು ಸಾವನ್ನಪ್ಪಿದ್ದು 10 ಕ್ಕೂ ಹೆಚ್ಚು ಮೇಕೆಗಳು ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಅಪ್ಪಾಜಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಮಣ್ಣ ಎಂಬುವವರು ಮನೆಯ ಗೋಡೆ ಕುಸಿತದಿಂದ ಈ ಅವಘಡ ಸಂಭವಿಸಿದ್ದು. ಕೂಡಲೇ ಪಶು ಇಲಾಖೆಯ ಅಧಿಕಾರಿಗಳು ಬೇಟಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆಯನ್ನು ಅಧಿಕಾರಿಗಳು ರಾಮಣ್ಣ ಕುಟುಂಬದವರಿಗೆ ನೀಡಿದರು.

LEAVE A REPLY

Please enter your comment!
Please enter your name here