ಬಾರೀ ಮಳೆಗೆ ಶಾಲೆಯ ಮೇಲ್ಚಾವಣಿ ಕುಸಿತ

0
150

ಮಂಡ್ಯ/ಮಳವಳ್ಳಿ: ಕಳೆದ ರಾತ್ರಿ ಬಿದ್ದ ಬಾರೀ ಮಳೆಗೆ ಶಾಲೆಯ ಮೇಲ್ಚಾವಣಿ ಕುಸಿದ ಸಾವಿರಾರು ರೂ ನಷ್ಟ ವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ.
ಕಳೆದ ವಾರದಿಂದ ರಾತ್ರಿವೇಳೆಯಲ್ಲಿ ನಿರಂತರ ವಾಗಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ತಳಗ ವಾದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದು ಮನಗೊಂಡ ಶಾಲಾ ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರ ಮಾಡಲಾಗಿದ್ದು . ಕಳೆದ ಹಲವು ವರ್ಷಗಳಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ಗ್ರಾಮಸ್ಥರು ದುರಸ್ಥಿಗೊಳಿಸುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳನ್ನು ಸ್ಥಳಾಂತರ ಮಾಡಿದ್ದರೆ ಎಷ್ಟು ಪ್ರಾಣಗಳು ಬಲಿಯಾಗುತ್ತಿತ್ತೋ , ಒಟ್ಟಿನಲ್ಲಿ ಸರ್ಕಾರಿ ಶಾಲೆಗೆ ಮಕ್ಕಳು ಸೇರಿಸಿ ಎಂದು ಆಂದೋಲನ ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟನೆ ನೋಡಿ ಶಾಲೆಗೆ ಹೇಗೆ ಸೇರಿಸುವುದು ಎನ್ನುವುದು ಗ್ರಾಮಸ್ಥರ ವಾದ ಇಲಾಖೆಯೂ ಇನ್ನಾದರೂ ಎಚ್ಚೆತ್ತುಗೊಂಡು ಶಾಲಾ ಕಟ್ಟಡವನ್ನು ದುರಸ್ಥಿ ಮಾಡಬೇಕೆಂದು ಗ್ರಾಮದ ಮುಖಂಡ ಹನುಮೇ ಗೌಡರು ಒತ್ತಾಯಿಸಿದ್ದಾರೆ

ವರದಿ:ಮಳವಳ್ಳಿಯಿಂದ ಎ.ಎನ್ ಲೋಕೇಶ್ ನಮ್ಮೂರು ಟಿವಿ

LEAVE A REPLY

Please enter your comment!
Please enter your name here