ಬಾಲಕನ ಸಾವಿನ ರಹಸ್ಯ ಬಯಲು…?

0
125

ಸೊಣ್ಣಶೆಟ್ಟಹಳ್ಳಿ ಬಡಾವಣೆಯಲ್ಲಿ ಬಾಲಕ ಅನುಮಾನಾಸ್ಪದ ಸಾವಿನ ರಹಸ್ಯವನ್ನು ಭೇದಿಸುವಲ್ಲಿ ನಗರಠಾಣೆ ಪೊಲೀಸ್ ಯಶಸ್ವಿ.

ಚಿಕ್ಕಬಳ್ಳಾಪುರ/ ಚಿಂತಾಮಣಿ: ನಗರದ ಸೊಣ್ಣಶೆಟ್ಟಹಳ್ಳಿ ಬಡಾವಣೆಯಲ್ಲಿ ಜೂನ್ 30 ರಂದು ಶನಿವಾರ 7 ವರ್ಷದ ಬಾಲಕನೋರ್ವ ಅನುಮಾನಸ್ಪದ ಸಾವಿನ ಪ್ರಕರಣವನ್ನು ನಗರಠಾಣೆ ಪೊಲೀಸರು ಭೇದಿಸಿವಲ್ಲಿ ಯಶಸ್ವಿಯಾಗಿದ್ದು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬಾಲಕನ ತಾಯಿ ಭವಾನಿ @ ಸುಕನ್ಯ ಆಕೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಗಾರೇ ಮೇಸ್ತ್ರಿ ಮುರುಗಮಲ್ಲಾ ಗ್ರಾಮದ ಮೂರ್ತಿ ಆಗಿದ್ದು ಇಬ್ಬರನ್ನು ನಾಯಾಧೀಶರು ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಸೊಣ್ಣಶೆಟ್ಟಹಳ್ಳಿ ಬಡಾವಣೆಯ ಖಾಸಗಿ ಬಸ್ಸಿನ ಚಾಲಕ ಪ್ರಕಾಶ್ ಮತ್ತು ಸುಕನ್ಯ ರವರ ಪುತ್ರ ಏಳು ವರ್ಷದ ಸುದೀಪ್ ಕುಮಾರ್ ಅದೇ ಬಡಾವಣೆಯಲ್ಲಿರುವ ನಳಂದಾ ವಿದ್ಯಾಮಂದಿರದಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆ ಬಾಲಕ ಜೂನ್ 30 ರಂದು ಶನಿವಾರ ಎಂದಿನಂತೆ ಶಾಲೆಯನ್ನು ಮುಗಿಸಿಕೊಂಡು ಮನೆಗೆ ವಾಪಸ್ ಬಂದಿದ್ದ.

ಕೂಲಿ ಕೆಲಸಕ್ಕೆ ಹೋಗಿದ್ದ ಬಾಲಕನ ತಾಯಿ ಸುಕನ್ಯಾ ಸಂಜೆ ಮನೆಗೆ ಬಂದಾಗ ಮಲಗಿದ್ದ ಮಗ ಉಸಿರಾಟದಲ್ಲಿ ತೊಂದರೆಯಾಗಿ ಒರಳಾಡುತ್ತಿರುವುದನ್ನು ಕಂಡು ನೆರೆಹೊರೆಯವರು ಸಹಾಯದಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ.

ಜಿಲ್ಲಾ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ಡಿವೈಎಸ್ಪಿ ನಾಗೇಶ್ ಮಾರ್ಗದರ್ಶನದಲ್ಲಿ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತಪ್ಪ ಮತ್ತು ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪಿಎಸ್ ಐ ಪ್ರದೀಪ್ ಪೂಜಾರಿ, ಮಹಿಳಾ ಎ.ಎಸ್.
ಐ ಪದ್ಮ ಮತ್ತು ಚಂದ್ರಕಲಾ ನೇತೃತ್ವದ ತಂಡ ಕೊಲೆ ಪ್ರಕರಣ ಬೇಧಿಸಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here