ಬಾಲಕಾರ್ಮಿಕ ಪದ್ದತಿ ಯನ್ನು ತಡೆದು ಮಕ್ಕಳಿಗೆ ವಿದ್ಯಾಭ್ಯಾಸ..

0
154

ಮಂಡ್ಯ/ಮಳವಳ್ಳಿ: ಬಾಲಕಾರ್ಮಿಕ ಪದ್ದತಿ ಯನ್ನು ತಡೆದು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಉತ್ತಮಪ್ರಜೆ ಮಾಡಲು ಮುಂದಾಗಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಪ್ರಕಾಶ ಕರೆ ನೀಡಿದರು ‌ಮಳವಳ್ಳಿಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ. ವಕೀಲರ ಸಂಘ , ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾಯ೯ಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ತಾಲ್ಲೂಕಿನಲ್ಲಿ ಇನ್ನೂ ಬಾಲ ಕಾರ್ಮಿಕರ ಪದ್ದತಿ ಇರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದ ಅವರು ಸಕಾ೯ರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಕಾಯ೯ಕ್ರಮ ದ ಪ್ರಧಾನ‌ ಸಿವಿಲ್ ನ್ಯಾಯಾಧೀಶೆ ಎಂ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಕಾಯ೯ಕ್ರಮ ದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಆನಂದ ಕುಮಾರ್.ವಕೀಲರಾದ ಜಗದೀಶ.ರವೀಂದ್ರ ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು..

LEAVE A REPLY

Please enter your comment!
Please enter your name here