ಬಾಲಕಿಯರ ವಸತಿ ನಿಲಯ ಉದ್ಘಾಟನೆ

0
370

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ದೊಡ್ಡ ಗಂಜುರ್ ಗ್ರಾಮದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ, ಆರ್ ಎಂಎಸ್ಎ ಯೋಜನೆಯಡಿಯಲ್ಲಿ ದೂಡ್ಡಗಂಜುರ್ ನಲ್ಲಿ ನೂತವಾಗಿ ನಿರ್ಮಿಸಿರುವ ಬಾಲಕಿಯರ ವಸತಿ ನಿಲಯ ಕಟ್ಟಡವನ್ನು ಶಾಸಕ ಜೆಕೆ ಕೃಷ್ಣಾರೆಡ್ಡಿ ರವರು ಉದ್ಘಾಟನೆ ಮಾಡಿದರು .

ಕಾರ್ಯಕ್ರಮದಲ್ಲಿ ತಾ ಪಂ ಉಪಾಧ್ಯಾಕ್ಷರಾದ ಮಾತನಾಡಿ ಈ ಕಟ್ಟಡವನ್ನು ಸುಸಜ್ಜಿತವಾಗಿ ಕಟ್ಟಿದ್ದಿರಾ ಆದರೆ ಇದರಲ್ಲಿ ಮೂಲಭೂತ ಸೌಲಭ್ಯಯಿಲ್ಲ ಎಂದು ಶಾಸಕರ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿ ಮೂಲಭೂತ ಮಾಡಕೊಡಬೇಕೆಂದು ಕೊರಿದರು . ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ ಈಗಿನ ಕಾಲದಲ್ಲಿ ವಿಧ್ಯಭ್ಯಾಸ ಇಲ್ಲದಿದ್ದರೆ ಜಿವನದಲ್ಲಿ ಮುಂದೆ ಬರುವುದು ತುಂಬಾ ಕಷ್ಟವನ್ನು ಅನುಭವಿಸಿ ಬೇಕಾಗುತ್ತದೆ ಅದಕ್ಕಾಗಿ ಎಲ್ಲಾ ಮಕ್ಕಳ ಓದಿ ಮುಂದೆ ಬರಬೇಕೆಂದರು.
ಈ ಸಂದರ್ಭದಲ್ಲಿ ಜಯರಾಮರೆಡ್ಡಿ , ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ಖಲ್ಲಿಲ್ ,ತಾಪಂ ಅಧ್ಯಕ್ಷೆ ಶಾಂತಮ್ಮ ವರದರಾಜು ,ತಾಪಂ ಉಪಾಧ್ಯಕ್ಷರಾದ ನಡಂಪಲ್ಲಿ ಶ್ರೀನಿವಾಸ ,ಜೆ.ಡಿ ಎಸ್ ಉಪಾಧ್ಯಕ್ಷರಾದ ರವೀಂದ್ರ ಗೌಡು , ಹಮ್ಮಿದ ಉನ್ನಿಸಾ ,ತಮ್ಮ ರೆಡ್ಡಿ , ವೆಂಕಟರೆಡ್ಡಿ , ಆಂಜನೇಯ ,ರಾಮಕೃಷ್ಣಪ್ಪ ರಾಜು,ನಾರಾಯಣ ಸ್ವಾಮಿ ಮತ್ತು ಶಾಲೆಯ ವಿಧ್ಯಾರ್ಥಿಗಳು , ಶಾಲೆಯ ಶಿಕ್ಷಕರು ,ಶಿಕ್ಷಕಿಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here