ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ…

0
107

ವಿಜಯಪುರ/ಸಿಂದಗಿ:ನಾಗಬೇನಾಳ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ… ಮುದ್ದೆಬಿಹಾಳ ತಾಲೂಕಾ ನಾಗಬೇನಾಳ ಗ್ರಾಮದಲ್ಲಿ ಕಳೆದ ದಿನಗಳ ಹಿಂದೆ ನಡೆದ ಕುರುಬ ಸಮಾಜದ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ, ಸಿಂದಗಿ ತಾಲೂಕಾ ಕುರುಬರ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಯಿತು.ಪಟ್ಟಣದ ಕನಕದಾಸ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಪ್ರತಿಭಟನೆಯ ರ್ಯಾಲಿಯನ್ನು ನಡೆಸಿ ತಹಶೀಲ್ದಾರರವರಿಗೆ ಮನವಿಯನ್ನು ನೀಡಲಾಯಿತು.ಇದೆ ಸಂದರ್ಭದಲ್ಲಿ ಶಿಲ್ಪಾ ಕುದರಗೊಂಡ ಮಾತನಾಡಿ, ಮುದ್ದೆಬಿಹಾಳ ತಾಲೂಕಾ ನಾಗಬೇನಾಳ ಗ್ರಾಮದಲ್ಲಿ ಕುರುಬ ಸಮಾಜದ ಬಾಲಕಿ ಹಾಗೂ ವಿವಿಧ ಗ್ರಾಮಗಳಲ್ಲಿ ಹೆಣ್ಣು ಮಕ್ಕಳಮೇಲೆ ಅತ್ಯಾಚಾರ ನಡೆಯುತ್ತಿದ್ದು ಸರಕಾರ ಮತ್ತು ಜಿಲ್ಲಾಡಳಿತ ಈ ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ವಿಪಲರಾಗಿದ್ದು ಕೂಡಲೇ ಜಿಲ್ಲಾಡಳಿತ ಮತ್ತು ಸರಕಾರ ಇತಂಹ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಹೇಳಿದರು.ಇತಂಹ ಪ್ರಕರಣಗಳಲ್ಲಿ ರಾಜಕಿಯ, ಜಾತಿ ಸೆರಿದಂತೆ ಯಾವುದೆ ತಾರತಮ್ಯವನ್ನು ಮಾಡದೆ ಆರೋಪಿಗಳಿಗೆ ಯಾವುದೆ ರಿತಿಯಲ್ಲಿ ಬೆಂಬಲ ನೀಡದೆ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು, ಒಂದು ವೇಳೆ ಇವರಿಗೆ ಶಿಕ್ಷೆ ನೀಡದೇ ಹೋದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಾಂತ ಬಂದಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ

ಸಿಂದಗಿ ತಾಲೂಕಾ ಕುರುಬರ ಸಂಘದ ಅಧ್ಯಕ್ಷರು ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು ಕಾಯ೯ಕತ೯ರು ಉಪಸ್ಥಿತರು ಪಾಲ್ಗೊಂಡಿದರು…

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ…

LEAVE A REPLY

Please enter your comment!
Please enter your name here