ಬಾಲಕಿ ಸಾವು ಪ್ರಕರಣ, ಇಂದು ಮೇಯರ್ ಪಾರ್ಕ್ ಗೆ ಬೇಟಿ ಪರಿಶೀಲನೆ

0
135

ಬೆಂಗಳೂರು/ಕೆ.ಆರ್.ಪುರ:- ಕಳೆದ ಶನಿವಾರ ಸಂಜೆ ಬೆಂಗಳೂರಿನ ಮಹದೇವಪುರದ ಎಂವಿಜೆ ಲೇಔಟ್ ಪಾರ್ಕ್ ನಲ್ಲಿ ರಾಡ್ ಬಿಡ್ಡು ೧೩ ವರ್ಷದ ಬಾಲಕಿ ಪ್ರೀಯಾ ಮೃತಪಟ್ಟ ಸ್ಥಳಕ್ಕೆ ಇಂದು ಮೇಯರ್ ಪದ್ಮಾವತಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಇ‌ನ್ನು ಬಿಬಿಎಂಪಿ ಗೆ ಒಳಪಡುವ ಈ ಪಾರ್ಕ್ ನಲ್ಲಿ ಇಂತಹ ಅವಘಡ ಸಂಭವಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಮೃತಳ ಮನೆಗೂ ಬೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ಈ ಸಂಬಂದ ಮಹದೇವಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಬಾಲಕಿಯ ಸಾವಿಗೆ ಬೆಲೆಕಟ್ಟಲು ಆಗುವುದಿಲ್ಲಿ, ಬಿಬಿಎಂಪಿ ವತಿಯಿಂದ ಬಾಲಕಿಯ ಪೋಷಕರಿಗೆ ೫ ಲಕ್ಷ, ಜೊತೆಗೆ ಕಂಟ್ರಾಕ್ಟರ್ ಕಡೆಯಿಂದಲು ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು. ಅಧಿಕಾರಿಗಳು ಮತ್ತು ಗುತ್ತಿಗೆ ದಾರರವಿರುದ್ದ ಕ್ರಮ ಕೈಗೊಳ್ಳುವುದಾಗಿ ಮೇಯರ್ ಜಿ. ಪದ್ಮಾವತಿ ತಿಳಿಸಿದ್ದಾರೆ.

ಬೈಟ್: ಪದ್ಮಾವತಿ, ಮೇಯರ್

LEAVE A REPLY

Please enter your comment!
Please enter your name here