ಬಾವಿಗೆ ಬಿದ್ದು ದಂಪತಿಗಳು ಸಾವು..

0
186

ಮೈಸೂರು/ಹನೂರು:ಕ್ಷುಲಕ ಕಾರಣಕ್ಕೆ ದಂಪತಿಗಳಿಬ್ಬರು ಬಾವಿಗೆ ಬಿದ್ದು, ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಮಲೈಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನಾತ್ತ ಗ್ರಾಮದಲ್ಲಿ ನಡೆದಿದೆ. 

ಹನೂರು ಕ್ಷೇತ್ರ ವ್ಯಾಪ್ತಿಯ ಇಂಡಿಗನಾತ್ತ ಗ್ರಾಮದ ಮುರುಗೇಶ್ (೨೮) ಪತ್ನಿ ಶಾಂತಿ (೨೫)  ಬಾವಿಗೆ ಬಿದ್ದು, ಆತ್ಯಹತ್ಯ ಮಾಡಿಕೊಂಡ ದಂಪತಿಗಳು ಎಂದು ತಿಳಿದು ಬಂದಿದೆ.

ಘಟನೆ ವಿವರ : ಕಳೆದ ಮೂರು ವರ್ಷಗಳಿಂದ ಇಂಡಿಗನಾತ್ತ ಗ್ರಾಮದ ಮುರುಗೇಶ್  ತುಳಿಸಿಕೆರೆ ಅವರಿಗೆ ಗ್ರಾಮದ ವೀರಭದ್ರಯ್ಯನವ ಮಗಳು ಶಾಂತಿಯನ್ನು ಮದುವೆ ಮಾಡಿಕೊಡಲಾಗಿತ್ತು. ಮಕ್ಕಳಿಲ್ಲದ ಕಾರಣ  ಕಲಹದಿಂದ ಮನನೊಂದ ದಂಪತಿಗಳು ಗಲಾಟೆ ಮಾಡಿಕೊಂಡು ತೊಡು ಬಾವಿಗೆ ಬಿದ್ದು, ಆತ್ಮಹತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಗೃಹಿಣಿ ತಂದೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಪುಟ್ಟಮಾದಮ್ಮ ಹಾಗೂ ತಹಸೀಲ್ದಾರ್ ಕಾಮಾಕ್ಷಮ್ಮ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿನೋದ್ ಅವರು ಸ್ಥಳಕ್ಕೆ ತೆರಳಿ ಘಟನೆಯ ಬಗ್ಗೆ ಮಾಹಿತಿ ಪಡೆದರು.

ಈ ಬಗ್ಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here