ಬಾವಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ..

0
208

ಬಳ್ಳಾರಿ :ಬಾವಿಯಲ್ಲಿ ಬಿದ್ದು ವ್ಯಕ್ತಿ ಆತ್ಮಹತ್ಯೆ-ರವಿಕುಮಾರ್(32) ಮೃತ ವ್ಯಕ್ತಿ-ಮದುವೆಯಾಗಿ ಡಿವೋರ್ಸ್ ಆಗಿತ್ತು-ಮಾನಸಿಕ ಖಿನ್ನತೆಗೆ ಒಳಗಾಗಿದ್ದ-ಭಾನುವಾರ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದ-ಇಂದು ಶವವಾಗಿ ಪತ್ತೆ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಬಾವಿಯಲ್ಲಿ ಬಿದ್ದು ಆತ್ಮಹತ್ಯೆಆಡಿಕೊಂಡ ಘಟನೆ ನಡೆದಿದೆ.
ಮೇದಾರ ಕೇತಯ್ಯ ನಗರದ ರವಿಕುಮಾರ್ ಎಂಬ ಪೇಂಟರ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಈತನಿಗೆ ಮದುವೆಯಾಗಿ ಒಂದು ಮಗು ಇದೆ.‌ಈತನ ಹೆಂಡತಿ ರಾಮಲಕ್ಷಮ್ಮ‌ಕಳೆದ‌ ಒಂದು ವರ್ಷದ ಹಿಂದೆ ಈತನಿಗೆ ಡಿವೋರ್ಸ್ ನೀಡಿದ್ದಳು.‌ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತ ಭಾನುವಾರ ಸಂಜೆ ಮನೆಯಿಂದ ಹೊರಟು ಹೋಗಿದ್ದ. ಇದೀಗ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಇಂದಿರಾನಗರದ ಶಂಕ್ರಪ್ಪ ಬಾವಿಯಲ್ಲಿ ಈತನ ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೌಲ್ ಬಜಾರ್ ಪೊಲೀಸರು ಶವವನ್ನು ಮೇಲಕ್ಕೆತ್ತಿ, ವಿಮ್ಸ್ ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

LEAVE A REPLY

Please enter your comment!
Please enter your name here