ಬಿಎಸ್‍ವೈ ಗೆ ಸಿಎಂ ಟಾಂಗ್…

0
615

ಬಳ್ಳಾರಿ,/ಹೊಸಪೇಟೆ:ಇಂದಿರಾ ಗಾಂಧಿ ಜೈಲಿಗೆ ಹೋಗಿದ್ದು ಲಂಚ ತಗಂಡು ಹೋಗಿದ್ದಾ? ಇಲ್ಲಾ ಚೆಕ್ಕು ಮೂಲಕ ಜೈಲಿಗೆ ಹೋಗಿದ್ದಾ? ಅವರು ಹೋಗಿದ್ದು ತುರ್ತು ಪರಿಸ್ಥಿತಿ ಇದ್ದಾಗ. ಅಂದಿನ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಜೈಲಿಗೆ ಹೋಗಿದ್ರು ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಎಸ್‍ವೈ ಗೆ ಟಾಂಗ್ ಕೊಟ್ಟಿದ್ದಾರೆ.
ನಿನ್ನೆಯ ದಿನ ಬಿಎಸ್‍ವೈ ಇಂದಿರಾಗಾಂಧಿ ಜೈಲಿಗೆ ಹೋಗಿದ್ದನ್ನು ಪ್ರಸ್ತಾಪಿಸಿದ್ದರು. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಜೈಲಿಗೆ ಹೋಗುವ ಸಂದರ್ಭ ಇದ್ದರೂ ಬೇಲ್ ಪಡೆದು ತಿರುಗಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಪತ್ರಕರ್ತರೊಂದಿಗೆ ಸಿದ್ಧರಾಮಯ್ಯ ಬಿಎಸ್‍ವೈ ವಿರುದ್ಧ ಕಿಡಿ ಕಾರಿದರು.
ರಾಯಚೂರು ಜಿಲ್ಲೆಯ ಮಾನ್ವಿಗೆ ಹೋಗುವಾಗ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಬಿಜೆಪಿಯವರು ಗಲಭೆ ಎಬ್ಬಿಸಿದ್ದಾರೆ. ಮೆಸ್ತ ಎಂಬ ಯುವಕನನ್ನು ಮುಸ್ಲಿಮರು ಹೊಡೆದಿದ್ದಾರೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಇದರ ಅರ್ಥ ಏನು? ಬಿಜೆಪಿಯವರು ಐ ವಿಟ್ನೆಸ್ಸಾ? ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಗೊತ್ತಾಗಬೇಕಲ್ಲಾ. ಬಳಿಕ ತನಿಖೆ ನಡೆಯಲಿ. ಆಮೇಲೆ ಬಿಜೆಪಿಯವರು ಆರೋಪ ಮಾಡ್ಲಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಸೋಲುವ ಭಯ ಕಾಡುತ್ತಿದೆ. ಬಿಜೆಪಿಯವರು ಡೆಸ್ಪಿರೇಟ್ ಆಗಿಬಿಟ್ಟಿದ್ದಾರೆ. ಅದಕ್ಕೆ ಇವೆಲ್ಲವನ್ನೂ ಹತಾಶೆಯಿಂದ ಮಾಡ್ತಿದಾರೆ. ಕರಾವಳಿಯಲ್ಲಿಯೇ ಯಾಕೆ ಮಾಡ್ತಿದಾರೆ? ಎಂದು ಕಿಡಿ ಕಾರಿದರು.
ವೀರಶೈವ, ಲಿಂಗಾಯತÀ ಬೇರೆನಾ? ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ನನ್ನಲ್ಲಿ ಐದು ಜನ ಗುಂಪಿನ ಮುಖಂಡರು ಬಂದಿದ್ರು. ಐದು ಪಿಟಿಷನ್ಸ್ ಕಳುಹಿಸಿಕೊಡುವಂತೆ ಕೇಳಿದ್ದಾರೆ. ಅಲ್ಪಸಂಖ್ಯಾತ ಕಮೀಷನ್‍ಗೆ ನಾನು ಕಳುಹಿಸಿಕೊಡುತ್ತೇನೆ. ನಾನು ಯಾರ ಪರವೂ ಅಲ್ಲ, ವಿರೋಧಿಯೂ ಅಲ್ಲವೆಂದು ಸ್ಪಷ್ಟಪಡಿಸಿದರು. ಒಳಮೀಸಲಾತಿ ಕುರಿತಂತೆ ಬೋವಿ, ಲಂಬಾಣಿ ಮತ್ತು ಬಲಗೈನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲರನ್ನೂ ಕರೆಸಿ ಸಭೆ ನಡೆಸಿ ಒಳಮೀಸಲಾತಿ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದರು.
ಬಳ್ಳಾರಿ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಈ ವೇಳೆ ಇದ್ದರು.

LEAVE A REPLY

Please enter your comment!
Please enter your name here