ಬಿಜೆಪಿಯಿಂದ ಬೃಹತ್ ಪಾದಯಾತ್ರೆ

0
162

ವಿಜಯಪುರ/ಇಂಡಿ:ಗುತ್ತಿ ಬಸವಣ್ಣ ಏತನೀರಾವರಿ ಕಾಲುವೆಗೆ ನೀರು ಹರಿಸಲು ಹಾಗೂ ವಿವಿಧ ಬೇಡಿಕೆಗೆ ಆಗ್ರಹಿಸಿ ಬಿಜೆಪಿಯಿಂದ ಬೃಹತ್ ಪಾದಯಾತ್ರೆ ನಡೆಸಿದರು. ವಿಜಯಪುರ ಜಿಲ್ಲೆಯ ತಡವಲಗಾ ಗ್ರಾಮದಿಂದ ಇಂಡಿ ಪಟ್ಟಣದ ವರೆಗೆ ಬಿಜೆಪಿಯ ನೂರಾರು ಕಾರ್ಯಕರ್ತರು 12ಕಿಮೀ ದೂರದ ವರೆಗೆ ಪಾದಯಾತ್ರೆ ಮಾಡಿದರು. ಇನ್ನು ಪಾದಯಾತ್ರೆಯಲ್ಲಿ ಇಂಡಿ ಮಂಡಲದ ಬಿಜೆಪಿಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದು, ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವುದು, ನೀರಾವರಿ ಯೋಜನೆಯಲ್ಲಿ ಭೂಸ್ವಾಧಿನ ಪಡಿಸಿಕೊಂಡ ರೈತರಿಗೆ ಪರಿಹಾರ ನೀಡಲು ಮತ್ತು ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಆದಷ್ಟು ಬೇಗನೆ ಅನುಷ್ಠಾನಕ್ಕೆ ತರಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಅಲ್ಲದೇ, ಪಾದಾಯಾತ್ರೆ ಉದ್ದಕ್ಕು ರಾಜ್ಯ ಸರ್ಕಾರ ಹಾಗೂ ಇಂಡಿ ಶಾಸಕ ಯಶವಂತರಾಯಗೌಡಾ ಪಾಟೀಲ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು…

ನಮ್ಮೂರು ಟಿವಿ ನಂದೀಶ ಹಿರೇಮಠ

LEAVE A REPLY

Please enter your comment!
Please enter your name here