ಬಿಜೆಪಿ ಅಭಿನಂದನಾ ಸಮಾರಂಭ

0
131

ರಾಯಚೂರು:ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಗೆಲುವಿಗೆ ಕಾರಣರಾದ ಕಾರ್ಯಕರ್ತರ ಅಭಿನಂದನಾ ಸಮಾರಂಭ ಮತ್ತು ಶಾಸಕ ಶಿವರಾಜಗ ಪಾಟೀಲ್ ಸನ್ಮಾನ ಸಮಾರಂಭ ನಡೆಯಿತು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದ ಕಾರ್ಯಕರ್ತರು ಅಭಿನಂದನೆ ಹಾಗೂ ನೂತನ ಶಾಸಕರಾಗಿ ಆಯ್ಕೆಯಾದ ಡಾ.ಶಿವರಾಜ ಪಾಟೀಲ್ ಅವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಅಶೋಕ ಗಸ್ತಿ ಮಾನನಾಡಿದ್ರು.
ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಬೂತ್ ಮಟ್ಟದ ಕಾರ್ಯಕರ್ತರು ಬಿಜೆಪಿ ಗೆಲುವಿಗೆ ಕಾರಣರಾಗಿದ್ದು ಅಭಿನಂದನೆ ಸಲ್ಲಿಸಿ ಪ್ರತಿಯೊಬ್ಬ ಕಾರ್ಯಕರ್ತರು ಇದೇ ವೇದಿಕೆಯಲ್ಲಿ ವ್ಯವಸ್ಥಿತವಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು, ಮತ್ತು ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ ತಿಳಿಸಿದ್ರು. ನಗರವಿಧಾನಸಭಾ ಕ್ಷೇತ್ರದ 132 ಬೂತ್‍ಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕೇವಲ 88 ಬೂತ್‍ಗಳಲ್ಲಿ ಕಾಂಗ್ರೆಸ್ ಮುಂದೆಯಿದ್ದರು, ಎರಡು ಜೆಡಿಎಸ್ ಒಂದು ಪಕ್ಷೇತರ ಮುನ್ನಡೆಯಲ್ಲಿದ್ದರು. 132 ರಲ್ಲಿ ಬಿಜೆಪಿ ನಂಬರ್ ಒನ್ ಸ್ಥಾನದಲ್ಲಿದ್ದು ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಗ್ರಾಮಾಂತರ 19 ಬೂತ್‍ಗಳಲ್ಲಿ 18ರಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ ಒಂದರಲ್ಲಿ ಮುನ್ನಡೆ ಸಾಧಿಸಿದೆ ಎಂದ್ರು.21 ವಾರ್ಡಗಳಲ್ಲಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದಿದ್ದು 14 ವಾರ್ಡಗಳಲ್ಲಿ ಕಾಂಗ್ರೆಸ್ ಎರಡನೆ ಸ್ಥಾನದಲ್ಲಿದೆ. ಗ್ರಾಮಾಂತರ ಮಲಿಯಾಬಾದ್ ಕ್ಯಾಂಪ್‍ನಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಹರಿದುಬಂದಿವೆ.ಕಾರ್ಯಕರ್ತರ ಪರಿಶ್ರಮದಿಂದಾಗಿ ಬಿಜೆಪಿ ಗೆಲುವು ಕಂಡಿದ್ದು ಮುಂಬರುವ ನಗರಸಭೆ ಚುನಾವಣೆಯಲ್ಲಿ ಇದೇ ರೀತಿಯಾಗಿ ಕಾರ್ಯಕರ್ತರು ಕೆಲಸ ನಿರ್ವಹಿಸಿದಾಗ ಮಾತ್ರ ನಗರ ಸಭೆ ಗದ್ದುಗೆರಲು ಸಾದ್ಯ ಎಂದು ಹೇಳಿದ್ರು..ನೂತನ ಶಾಸಕರಾಗಿ ಆಯ್ಕೆಗೊಂಡ ಡಾ.ಶಿವರಾಜ ಪಾಟೀಲ್ ಅವರನ್ನು ಹಿರಿಯ ಮುಖಂಡರು, ಕಾರ್ಯಕರ್ತರು, ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಜಿಲ್ಲಾಧ್ಯಕ್ಷ ಶರಣಪ್ಪಗೌಡ, ನಗರಾಧ್ಯಕ್ಷ ಯು.ಆಂಜನೇಯ, ಹಿರಿಯ ಮುಖಂಡರಾದ ಆರ್.ತಿಮ್ಮಯ್ಯ, ಶಿವಬಸಪ್ಪ ಮಾಲಿಪಾಟೀಲ್, ಹರವಿ ನಾಗನಗೌಡ, ತ್ರಿವಿಕ್ರಮ ಜೋಷಿ, ರಾಘವೇಂದ್ರ, ಕಡಗೋಲು ಆಂಜನೇಯ, ರಾಜಕುಮಾರ. ಎ.ಚಂದ್ರಶೇಖರ, ಗಂಗೂಬಾಯಿ, ಶೋಭಾ, ನರಸಪ್ಪ, ಆರ್.ಕೆ.ಅಮರೇಶ, ರಾಮು ಗಿಲೇರಿ, ಕೆ.ಎಂ.ಪಾಟೀಲ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here