ಬಿಜೆಪಿ ಜಾಗೃತಿ ಸಮಾವೇಶ

0
131

ಬೆಂಗಳೂರು/ ಮಹದೇವಪುರ:- ನಮ್ಮ ಕ್ಷೇತ್ರದಿಂದ ವಸೂಲಿ ಆಗುವ ತೆರಿಗೆಯಲ್ಲಿ ಕನಿಷ್ಠ ಶೇಕಡಾ ೨೫ ರಷ್ಟು ಅನುಧಾನ ನೀಡದೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೊರಿತ್ತಿದೆ ಎಂದು ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ದೂರಿದರು.
ಕ್ಷೇತ್ರದ ಗ್ರಾಮಾಂತರದ ರಾಂಪುರ ಗ್ರಾಮದಲ್ಲಿ ಏರ್ಪಡಿಸಿದ ಬಿಜೆಪಿ ಜಾಗೃತಿ ಸಮಾವೇಶವನ್ನು ಸಂಸದ ಪಿಸಿ.ಮೊಹನ್, ಮಾಜಿ ಸಚಿವ ಬಚ್ಚೆಗೌಡ ಸೇರಿದಂತೆ ಮುಖಂಡರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅರವಿಂದ್ ಲಿಂಬಾವಳಿ ಅವರು ಇಷ್ಟುದಿನ ಅಭಿವೃದ್ಧಿ ಕೆಲಸಗಳು ಮಾಡದೇ ಚುನಾವಣಾ ಸಮಯದಲ್ಲಿ ಹೊಸ ಹೊಸ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಲೋಕಾರ್ಪಣೆ ಮಾಡದೇ ಹಾಗೆಯೇ ಉಳಿದಿವೆ, ನಾವು ಕ್ಷೇತ್ರದ ಜನತೆಯ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದರೆ, ಮಿಟಗಾನಹಳ್ಳಿ ಗ್ರಾಮದಲ್ಲಿ ಬಸ್ಸು ಡಿಪೋಗೆ ಮೀಸಲಿಟ್ಟ ಜಾಗದಲ್ಲಿ ಕಸವನ್ನು ತಂದು ರಾಶಿ ಹಾಕಿ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರದ ವೈಪಲ್ಯಗಳನ್ನು ಎಲೆ ಎಲೆ ಯಾಗಿ ಬಿಚ್ಚಿಟ್ಟರು.ಕೇಂದ್ರ ಲೋಕಸಭಾ ಸದಸ್ಯ ಪಿಸಿ.ಮೊಹನ್ ಮಾತನಾಡುತ್ತಾ ಕೆಂದ್ರ ಸರ್ಕಾರದಿಂದ ಬಂದ ಅನುದಾನವನ್ನು ಸದ್ಬಳಕೆಯಾಗದೆ ಪಕ್ಕ ದಾರಿ ಹಿಡಿದಿದೆ, ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.
ನಿಷ್ಠಾವಂತ ಐಎಎಸ್, ಐಪಿಎಸ್ ಅಧಿಕಾರಿಗಳು ರಾಜ್ಯ ಸಚಿವರು ನೀಡುವ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಮತ್ತೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಮಾಡುವುದು ಖಚಿತ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ಬಚ್ಚೆಗೌಡ ಮಾತನಾಡುತ್ತಾ ಈಶಾನ್ಯ ಭಾಗದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದ್ದು ರಾಷ್ಟ್ರ ರಾಜಕಾರಣದಲ್ಲಿ ಈಗಾಗಲೇ ೨೨ ರಾಜ್ಯಗಳು ಬಿಜೆಪಿ ಪಾಲು ಆಗಿದ್ದು, ೨೩ನೆ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ನುಡಿದರು.
ಭಾರತದ ಭೂಪಟವನ್ನು ನೋಡಿದರೆ ದೇಶದ ನಾಲ್ಕು ರಾಜ್ಯಗಳು ಹೊರತುಪಡಿಸಿ ಎಲ್ಲಾ ಕೇಸರಿಮಯವಾಗಿದೆ, ನರೇಂದ್ರ ಮೋದಿ, ಅಮಿತ್ ಶಾ ಅವರ ಅಭಿವೃದ್ಧಿ ಮ್ಯಾಜಿನಿಂದ ನಮ್ಮ ರಾಜ್ಯವೂ ಬಿಜೆಪಿ ಪಾಲು ಆಗುವುದು ಖಚಿತ ಎಂದು ತಿಳಿಸಿದರು.
ಕಾರ್ಯಕರ್ತರು ಬೂತ್ ಮಟ್ಟ ದಿಂದ ಒಗ್ಗೂಡಿ ಕೆಲಸ ಮಾಡಿದರೆ ಹೊಸಕೋಟೆ ಹಾಗೂ ಮಹದೇವಪುರ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಎಂದರು.
ಇದೇ ವೇಳೆ ಅನ್ಯ ಪಕ್ಷಗಳಿಂದ ಬಂದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಕೆ.ಆರ್.ಪುರ ಮಾಜಿ ಶಾಸಕ ನಂದೀಶ್ ರೆಡ್ಡಿ, ಕ್ಷೇತ್ರದ ಅಧ್ಯಕ್ಷ ರಾಜಾರೆಡ್ಡಿ, ಕಾರ್ಯಕಾರಣಿ ಸದಸ್ಯರು ಪಾಪನ್ನ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ನಟರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಾಲಾ ಮಾರುತಿ, ತಾ.ಪಂ.ಸದಸ್ಯೆ ಶಶಿಕಲಾ,
ಮುಖಂಡರು ಎಸ್.ಎಲ್.ಎನ್ ಮಂಜುನಾಥ್, ನಂಜುಂಡ, ಮಹೇಶ್, ಮುನಿರಾಜ್ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿದರು.

LEAVE A REPLY

Please enter your comment!
Please enter your name here