ಬಿಜೆಪಿ ಜಿಲ್ಲಾದ್ಯಕ್ಷನ ವಿರುದ್ದ ಪ್ರತಿಭಟನೆ

0
372

ಬಳ್ಳಾರಿ/ ಹೊಸಪೇಟೆ:ನಗರದ ಬಿಜೆಪಿ ಕಚೇರಿ ಬಳಿ ಹೂವಿನ ಹಡಗಲಿ ಬಿಜೆಪಿ ಪದಾಧಿಕಾರಿಗಳು ಜಿಲ್ಲಾದ್ಯಕ್ಷ ಚನ್ನಬಸವನ ಗೌಡ ವಿರುದ್ದ ಪ್ರತಿಭಟಿಸಿದರು.
ಹೂವಿನ ಹಡಗಲಿ ಬಿಜೆಪಿ ತಾಲೂಕು ಅಧ್ಯಕ್ಷ ವಿಜಯಕುಮಾರ್ ರವರನ್ನು ಅಧ್ಯಕ್ಷ ಸ್ಥಾನದಿಂದ ಬಿಜೆಪಿ ಜಿಲ್ಲಾ ಘಟಕ ಹಾಗೂ ರಾಜ್ಯ ಕೋರ್ ಕಮಿಟಿ ಕೆಳಗಿಳಿಸಿದ್ದು,ಹಡಗಲಿ ಕ್ಷೇತ್ರ ಪದಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಕಡಿಮೆ ಪ್ರಮಾಣದಲ್ಲಿ ಇತ್ತು. ಆದರೆ ವಿಜಯಕುಮಾರ್ ಹಡಗಲಿ ಬಿಜೆಪಿ ಘಟಕಾಧ್ಯಕ್ಷ ಆದ ಬಳಿಕ ಬೂತ್ ಮಟ್ಟದಿಂದ ಸಂಘಟಿಸಿ, ಪಕ್ಷವನ್ನು ಬಲ ಪಡಿಸಿದ್ದಾರೆ. ಪಕ್ಷದ ನೆರವು ಇಲ್ಲದೆ ತಾಲೂಕಿನ ಎಲ್ಲ ಮೋರ್ಚಾಗಳ ಪದಾಧಿಕಾರಿಗಳನ್ನು ಒಟ್ಟು ಗೂಡಿಸಿ ಸಂಘಟನೆ ಮಾಡಿದ್ದಾರೆ. ಹಾಗಾಗಿ ಮತ್ತೆ ವಿಯಯಕುಮಾರ್ ಅವರನ್ನು ಬಿಜೆಪಿ ತಾಲೂಕು ಅಧ್ಯಕ್ಷರಾಗಿ ನೇಮಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡರ ರಾಜಕೀಯ ಕುತಂತ್ರಕ್ಕೆ ಪಕ್ಷದ ನಿಷ್ಠಾವಂತ ವ್ಯಕ್ತಿಗೆ ಕಾರಣ ಇಲ್ಲದೆ ಅಧ್ಯಕ್ಷ ಸ್ಥಾನದಿಂದ ಕೆಳಗಿಸಿದ್ದಾರೆ. ಈ ಬಗ್ಗೆ ಉತ್ತರ ನೀಡುವಂತೆ ಕೋರಿದರೆ, ಹೊಸಪೇಟೆಗೆ ಬನ್ನಿ ಎಂದು ಕರೆದು, ತಾವೇ ಗೈರಾಗಿದ್ದಾರೆ ಎಂದು ನೆರೆದಿದ್ದ ನೂರಾರೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನ ಗೌಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಸಾಮೂಹಿಕ ರಾಜೀನಾಮೆ ನೀಡಲು ಪದಾಧಿಕಾರಿಗಳು ಮುಂದಾದರು. ತಾಲೂಕು ಉಪಾಧ್ಯಕ್ಷ ಪುತ್ರೇಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಉಚ್ಚೆಂಗೆಪ್ಪ, ದುರುಗಪ್ಪ, ಮಂಜುನಾಥ, ಇದ್ದರು.

LEAVE A REPLY

Please enter your comment!
Please enter your name here