ಬಿಜೆಪಿ ಪಕ್ಷ ಡೋಂಗಿ, ಅವರೆಲ್ಲಾ ಡೋಂಗಿಗಳು

0
145

ರಾಯಚೂರು. ಬಿಜೆಪಿ ಪಕ್ಷ ಡೊಂಗಿ ಪಕ್ಷ ಅಲ್ಲಿರುವವರೆಲ್ಲಾ ಡೊಂಗಿಗಳು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ವ್ಯಕ್ತಪಡಿಸಿದರು.
ಅವರಿಂದು ನಗರದ ಕೃಷಿ. ವಿ.ವಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದ ಎಲ್ಲಾ ನಾಯಕರು ಡೊಂಗಿ ಮಾತುಗಳನ್ನು ಕಲಿತ್ತಿದ್ದಾರೆ.ಸಾಲ ಮನ್ನಾ ಕ್ಕಾಗಿ ರಾಜ್ಯದಿಂದ ಕಾಂಗ್ರೆಸ್ ನಿಯೋಗ ತೆರಳೆ ಕೇಂದ್ರದ ಸರಕಾರ ಮೋದಿಬಳೆಗೆ ಕರೆದೊಯ್ದು ಸಾಲ ಮನ್ನಾ ಕುರುತು ಮಾತನಾಡದೆ ಮೌನ ವಹಿಸಿದ್ದರು.ರಾಜ್ಯದಲ್ಲಿ ನಿವು ಸಾಲ ಮನ್ನಾ ಮಾಡಿ ಕೇಂದ್ರದಿಂದ ಸಾಲಮನ್ನಾ ಮಾಡಿಸುವುದಾಗಿ ಯಡಿಯೂರಪ್ಪ ನವರು ಇದೀಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಕೀಲೆ ಮೋದಿ ಕೈಯಲಿದೆ ಎಂದರು.
ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ೧೬೫ ಪ್ರಣಾಳಿಕೆ ಯಲ್ಲಿ ೧೫೫ ಪ್ರಣಾಳಿಕೆ ಗಳನ್ನು ಹೀಡೆರಿಸಿದೆ.ಬಡವರಿಗೆ, ದಲಿತರಿಗೆ,ಮಹಿಳೆಯರಿಗೆ, ರೈತರಿಗೆ ಸಮಾನವಾಗಿ ನ್ಯಾಯಯನ್ನು ಒದಗಿಸಿದೆ ಆದರೆ ಕೇಂದ್ರ ಸರಕಾರ ಕಣ್ಣಿರು ಒರೆಸುವ ಕೆಲಸಮಾಡುತ್ತಿದೆ.ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಅನ್ನಬಾಗ್ಯ,ಕ್ಷೀರಬಾಗ್ಯ,ಶಾದಿ ಭಾಗ್ಯಗಳ ಯೋಜನೆಯನ್ನು ಜಾರಿಗೆ ತಂದಿದೆ. ಬಿಜೆಪಿ ಸರಕಾರ ರೈತ ವಿರೋದಿ ಸರಕಾರ ತನ್ನ ಅಧಿಕಾರದ ಮೂರು ತಂಗಳಲ್ಲಿ ರೈತರ ಮೇಲೆ ಗೋಲಿಬಾ ಮಾಡಿಸಿ ೩ ಜನ ರೈತರು ಸತ್ತರು.ನಮ್ಮ ಸರಕಸರತ ನುಡುದಂತೆ ನಡೆದಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರಪ್ಪ ಬಂದರೂ ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ.ನಾವು ಹಸಿವು ಮುಕ್ತ ಮಾಡಲು ಹೊರಟಿದ್ದರೆ.ಬಿಜೆಪಿ ಕಾಂಗ್ರೆಸ್ ಮುಕ್ತಮಾಡಲು ಹೊರಟಿದೆ ನಾಚಿಕೆಯಾಗಬೇಕು ಯಡಿಯೂರಪ್ಪ ನವರಿಗೆ ಎಂದರು.
ವಾಜಪೇಯಿ ಸರಕಾರ ದಲ್ಲಿ ೩೭೧ ಕಲಂ ಜಾರಿ ಮಾಡಲು ರಾಜ್ಯದಿಂದ ಎಸ್ ಎಂ.ಕೃಷ್ಣ ಮನವಿ ಹೋರಾಟ ಮಾಡಿದರು ಅಡ್ವಾಣಿಯವರು ಮಾಡಲು ಸಾದ್ಯವಿಲ್ಲ ಎಂದರು.ಸೋನಿಯಾ ಗಾಂಧಿ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹೈ, ಕ ಭಾಗಕ್ಕೆ ೩೭೧ ಜೆ ಕಲಂ ಜಾರಿಗೆ ತಂದು ಶಿಕ್ಷಣ, ಉದ್ಯೋಗ, ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಶಾ ಬಂದರೂ ಮೋದಿ ಬಂದರೂ ಎನೂ ಮಾಡೊಕೆ ಆಗಲ್ಲ ಮುಂದಿನ ಚುನಾವಣೆಯಲ್ಲಿ ನಾವೆ ಗೆಲ್ಲುವುದು ಎಂದರು.

LEAVE A REPLY

Please enter your comment!
Please enter your name here