ಬಿಜೆಪಿ ಬೈಕ್ ರ್ಯಾಲಿ ತಡೆಯಲು ಖಾಕಿ ಸರ್ಪಗಾವಲು.

0
160

ಬೆಂಗಳೂರು/ಕೆಆರ್ ಪುರ:- ಹಿಂದೂ
ನಾಯಕರ ಹತ್ಯೆಯನ್ನು ಖಂಡಿಸಿ ಬಿಜೆಪಿ ಬೆಂಗಳೂರಿ ನಿಂದ ಮಂಗಳೂರಿಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು, ರ್ಯಾಲಿ ತಡೆಯಲು ಬೆಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲು ಸಿದ್ದಪಡಿಸಿದೆ. ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಬೈಕ್ ಗಳಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು.
ಕೆ.ಆರ್.ಪುರ ಕ್ಷೇತ್ರದಿಂದ ಬೈಕ್ ರ್ಯಾಲಿ ಹೊರಟ್ಟಿದ ಬಿಜೆಪಿ ಕಾರ್ಯಕರ್ತರು.
ಸುಮಾರು ೨೦ಕ್ಕೂ ಹೆಚ್ಚು ಬೈಕ್ ಗಳಲ್ಲು ಬಂದ ೨೩ ಕ್ಕು ಹೆಚ್ಚು ಕಾರ್ಯಕರ್ತರ ಬಂಧನ.
ಬೆಂಗಳೂರು ಗ್ರಾಮಾಂತರ ಹೊಸಕೋಟೆ ಟೋಲ್ ಬಳಿ ಪೊಲೀಸರು ಬೈಕ್ ಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಬಿಜೆಪಿ ರ್ಯಾಲಿಗೆ ತೆರಳುವ ಬೈಕ್ ಗಳನ್ನು ವಾಪಸ್ ಕಳುಹಿಸುವ ಕಾರ್ಯ ಮಾಡಲಾಗುತ್ತಿದೆ. ಬಿಜೆಪಿ ಭಾವುಟವಿಲ್ಲದೆ ಬಂದ ೨೦ ಕ್ಕು ಹೆಚ್ಚು ಬೈಕ್ ಗಳನ್ನು ತಡೆದ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here