ಬಿಜೆಪಿ ವಿಜಯೋತ್ಸವ..

0
186

ಮಂಡ್ಯ/ಮಳವಳ್ಳಿ: ಗುಜರಾತ್ ನಲ್ಲಿ ಬಿಜೆಪಿ ಜಯಬೇರಿ ಬಾರಿಸಿದ ಹಿನ್ನಲೆಯಲ್ಲಿ ಮಳವಳ್ಳಿ ತಾಲ್ಲೂಕು ಬಿಜೆಪಿ ಘಟಕವತಿಯಿಂದ ವಿಜಯೋತ್ಸವವನ್ನು ಆಚರಿಸಲಾಯಿತು. ಮಳವಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಗಡಿಯ ಮುಂದೆ ಸಿಹಿಹಂಚಿ ಸಂಭ್ರಮ ಪಟ್ಟರು, ನಂತರ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ದೇಶ ವ್ಯಾಪ್ತಿ ಬಿಜೆಪಿ ಪಕ್ಷದ ಕಡೆ ಜನರ ಬೆಂಬಲ ವ್ಯಕ್ತಪಡಿಸುತ್ತಿದ್ದು, ಮೋದಿ ಅವರ ಸಾಧನೆಯನ್ನು ದೇಶ ವಿದೇಶವೇ ಮೆಚ್ಚಿದ್ದು, ದೇಶದ ಎಲ್ಲಾಕಡೆ ಕಾಂಗ್ರೆಸ್ ನೆಲಸಮ ಮಾಡಲು ಬಿಜೆಪಿ ಹೊರಟಿದೆ ಎಂದರು. ಈ ಸಂದಭ೯ದಲ್ಲಿ ಹಿರಿಯ ಬಿಜೆಪಿ ಮುಖಂಡ ಅಪ್ಪಾಜಿಗೌಡ, ಎಂ.ಎನ್ ಕೃಷ್ಣ, ರಾಜು, ಮುದ್ದಮಲ್ಲು. ವೇಣು ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here