ಬಿಜೆಪಿ..ಸಂಭ್ರಮಾಚರಣೆ (ಬೆಂ,ಕೆಆರ್ ಪುರ)

0
183

ಬೆಂಗಳೂರು/ಕೆ.ಆರ್.ಪುರ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಷ್ಟ್ರದೆಲ್ಲೆಡೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ, ಇತ್ತ ಬೆಂಗಳೂರಿನ ಕೆಆರ್ ಪುರದಲ್ಲೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿ ಬೈಕ್ ರ್ಯಾಲಿಯ ಮುಖೇನ ತೆರಳಿ ಸಂಭ್ರಮಪಟ್ಟರು, ಪಂಚರಾಜ್ಯಗಳ ಫಲಿತಾಂಶದಲ್ಲಿ ಉತ್ತರಖಾಂಡ, ಉತ್ತರಪ್ರದೇಶದಲ್ಲಿ ಗೆಲುವು ಸಾಧಿಸಿದ್ದು ಗೋವಾದಲ್ಲೂ ಕಾಂಗ್ರೇಸ್ಗೆ ಫೈಟ್ ನೀಡಿರುವುದರಿಂದ ಬಿಜೆಪಿ ಕಾರ್ಯಕರ್ತರು ಕೆಆರ್ಪುರದ ಹೊರಮಾವಿನಲ್ಲಿ ಮಾಜಿ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪರಸ್ಪರ ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚಿಕೊಳ್ಳುವ ಮೂಲಕ, ಪಟಾಕಿ ಸಿಡಿಸಿ, ಸಿಹಿ ಹಂಚಿ ಪ್ರಧಾನಿ ಮೋದಿಗೆ ಜೈಕಾರ ಕೂಗುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ಕಪ್ಪುಕುಳಗಳಿಗೆ ಕಡಿವಾಣ ಹಾಕಲು ಕೈಗೊಂಡಿದ್ದ ಹಣದ ಅಪಮೌಲ್ಯೀಕರಣದ ನಿರ್ಧಾರ  ದೇಶದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದು, ಚುನಾವಣೆ ಫಲಿತಾಂಶ ಅದರ ಪ್ರತಿಬಿಂಬ, ಬಿಜೆಪಿ ಪಕ್ಷ ಪಂಚರಾಜ್ಯಗಳ ಚುನಾವಣೆಯಲ್ಲಿ ಮೇಲುಗೈ ಸಾದಿಸಿರುವುದು ಸಂತಸ ತಂದಿದೆ ಎಂದು ಶಾಸಕ ನಂದೀಶ್ ರೆಡ್ಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here