ಬಿರುಗಾಳಿ ಮಳೆಗೆ ಉರುಳಿದ ಬಾಳೆ ಅಪಾರ ನಷ್ಠ

0
175

ಬಳ್ಳಾರಿ: ಸಿರುಗುಪ್ಪ ಮತ್ತು ಹೊಸಪೇಟೆ ತಾಲೂಕಿನ ಕೆಲ ಭಾಗದಲ್ಲಿ ಬಿರು ಬಿಸಲಿನಿಂದ ಬಸವಳಿದಿದ್ದ ಜನತೆಗೆ ನಿನ್ನೆ ಸಂಜೆ ಮತ್ತು ರಾತ್ರಿ ಸುರಿದ ಮಳೆ ತಂಪು ತಂದಿರುವುದು ಒಂದು ಕಡೆಯದಾರೆ, ಹಂಪಿ ಕಮಲಾಪುರದ ಪ್ರದೇಶದಲ್ಲಿ ಬಾಲೆ ಬಳೆ ನೆಲಕ್ಕೆ ಉರುಳಿ ಭಾರಿ ನಷ್ಟವಾಗಿದೆ. ಪ್ರವಾಸಿಗರಿಗೆ ನೆರಳಿಗಾಗಿ ಹಾಕಿದ್ದ ಚಪ್ಪರ ಕಿತ್ತು ಚೂರು,ಚೂರು.

ನಿನ್ನೆ ಸಂಜೆ ಸಿರುಗುಪ್ಪ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಮಳೆ ಈ ಪ್ರದೇಶದ ಜನತೆಗೆ ತಂಪು ತಂದಿದೆ ಅಲ್ಲದೆ. ಮುಂಗಾರು ಹಂಗಾಮಿಗೆ ತಮ್ಮ ಕೃಷಿ ಭೂಮಿಯನ್ನು ಉಳುಮೆ ಮಾಡಿಕೊಳ್ಳು ಸಹಕಾರಿಯಾಗಿದೆ.
ಇತ್ತ ಐತಿಹಾಸಿಕ ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ನಾಡಿದ್ದು ನಡೆಯುವ ರಥೋತ್ಸವಕ್ಕೆ ಬರುವ ಪ್ರವಾಸಿಗರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಹಾಕಿದ್ದ ಬಿದಿರಿನ ಚಪ್ಪರ ಮತ್ತು ಹಂಪಿ ಕಮಲಾಪುರ, ಬುಕ್ಕ ಸಾಗರ, ಸೀತಾರಾಮ್ ತಾಂಡ ಮೊದಲಾದ ಗ್ರಾಮಗಳಲ್ಲಿ ವಿಜಯನಗರ ಕಾಲುವೆ ಮತ್ತು ಕಮಲಾಪುರ ನೀರಿನಿಂದ ಬೆಳೆದಿದ್ದ ಬಾಳೆ ಬಳೆ ಬಿರುಗಾಳಿ ಮಳೆಗೆ ಉರುಳು ನೆಲಕ್ಕೆ ಬಿದ್ದಿದೆ.

ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಂದಾತಿಗೆ ಲಕ್ಷಾಂತರ ರಪಾಯಿ ನಷ್ಟ ಉಂಟಾಗಿದೆ. ಮಳೆಯ ಜೊತೆಗೆ ಮೊದಲು ಬೀಸಿದ ಬಿರುಗಾಳಿ ಈ ಅನಾಹುತಕ್ಕೆ ಕಾರಣವಾಗಿದೆ.
ಹಂಪಿ ಪ್ರದೇಶ ಕೆಲ ಗುಡಿಸಲುಗಳು ಕುಸಿದು ಬಿದ್ದಿವೆ ವಿವಿಧ ಪಕ್ರರಣಗಳಲ್ಲಿ ಇಬ್ಬರು ಅಸುನೀಗಿರುವ ಘಟನೆ ತಿಳಿದುಬಂದಿದೆ.

LEAVE A REPLY

Please enter your comment!
Please enter your name here