ಬಿರ್ಲಾ ಫ್ಯಾಶನ್ ಅಂಡ್ ರೀಟೇಲ್

0
169

ಬೆಂಗಳೂರು/ಕೆಆರ್ ಪುರ:ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರೀಟೇಲ್ ಲಿಮಿಟೆಡ್ನ ಜನಪ್ರಿಯವಾದ ಬ್ರಾಂಡ್ ಆಗಿರುವ ಫಾರ್ಎವರ್ 21 ಫಾಲ್ 2017 ಕಲೆಕ್ಷನ್ ಅನ್ನು ಬಿಡುಗಡೆ ಮಾಡಿದ್ದು, ಈ ಫಾರ್ವೆರ್ 21 ರ ಫಾಲ್-2017 ಸಂಗ್ರಹದಲ್ಲಿ ಗ್ಲಾಮರ್ ಆದ ಉಡುಗೆ-ತೊಡುಗೆಗಳಿವೆ.
ವೈಟ್ಫೀಲ್ಡ್ನಲ್ಲಿರುವ ವಿಆರ್ ಮಾಲ್ನಲ್ಲಿರುವ ಫಾರ್ಎವರ್ 21 ಮಳಿಗೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಶನ್ ಗುರು ಪ್ರಸಾದ್ ಬಿಡ್ಡಪ್ಪ ಅವರು ವಿನ್ಯಾಸಗೊಳಿಸಿದ ಫಾಲ್-2017 ರ ಸರಣಿಯ ಉಡುಪುಗಳನ್ನು ಬುಧವಾರ ಸಂಜೆ ಪ್ರದರ್ಶಿಸಲಾಯಿತು. ಈ ವಿನೂತನವಾದ ಸ್ಟೈಲಿಶ್ನ ಉಡುಗೆಗಳನ್ನು ತೊಟ್ಟ ಸ್ಯಾಂಡಲ್ವುಡ್ ಬೆಡಗಿ ಐಂದ್ರಿತಾ ರೇ ಅವರು ರ್ಯಾಂಪ್ನಲ್ಲಿ ಹೆಜ್ಜೆ ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವಿಶ್ವದ ಅಗ್ರಶ್ರೇಯಾಂಕಿತ ಸ್ನೂಕರ್ ಮತ್ತು ಬಿಲಿಯಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ, ಸ್ಯಾಂಡಲ್ವುಡ್ನ ನಟಿ ರಿಯಾ ನಲ್ವಾಡೆ, ಗಾಲ್ಫರ್ ಮತ್ತು ಸಾಮಾಜಿಕ ಕಾರ್ಯಕರ್ತ ನಿಕ್ಕಿ ಪೊನ್ನಪ್ಪ ಸೇರಿದಂತೆ ಇನ್ನೂ ಹಲವಾರು ಗಣ್ಯರು ಆ ಸುಂದರ ಸಂಜೆಯ ಫ್ಯಾಶನ್ ಲೋಕದ ಅನಾವರಣಕ್ಕೆ ಸಾಕ್ಷಿಯಾದರು.
ಈ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಆದಿತ್ಯ ಬಿಲರ್ಾ ಫ್ಯಾಶನ್ ಅಂಡ್ ರೀಟೇಲ್ ಲಿಮಿಟೆಡ್ನ (ಇಂಡಿಯಾ ಬ್ಯುಸಿನೆಸ್ ಆಪರೇಶನ್ಸ್) ಫಾರ್ಎವರ್ 21 ರ ಬ್ರಾಂಡ್ ಹೆಡ್ ರಾಹುಲ್ ಝಾಂಬ್ ಅವರು, “ಬಹುನಿರೀಕ್ಷಿತವಾದ ಫಾಲ್ 2017 ರ ಸರಣಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಲು ನಮಗೆ ಸಂತಸವೆನಿಸುತ್ತಿದೆ. ಈ ಉತ್ಪನ್ನಗಳು ಜಾಗತಿಕ ಮಟ್ಟದ ಫ್ಯಾಶನ್ ಲೋಕದಲ್ಲಿ ಅತ್ಯಂತ ಜನಪ್ರಿಯವಾಗಿವೆ. ಫ್ಯಾಶನ್ ಎಂಬುದು ಸ್ವಯಂ ಅಭಿವ್ಯಕ್ತಿಗೆ ಪ್ರಮುಖ ಸಾಧನವಾಗಿದೆ ಮತ್ತು ನಮ್ಮ ಫಾಲ್ ಅಭಿಯಾನ ಇಂತಹ ಆಲೋಚನೆಯನ್ನು ಅನುರಣಿಸುತ್ತದೆ. ನಮ್ಮ ಈ ಸಂಗ್ರಹವು ವೈಯಕ್ತಿಕ ಸಂತಸವನ್ನು ವ್ಯಕ್ತಪಡಿಸುವ ಸೂಕ್ತ ಉತ್ಪನ್ನಗಳನ್ನು ಒಳಗೊಂಡಿದೆ. ಇದನ್ನು ಕಮ್ ಆಲ್ ಇನ್ ಲವ್ ಎಂದು ಕರೆಯಲಾಗುತ್ತದೆ. ಫಾರ್ ಎವಬಿಲರ್ರಲ್ಲಿ ಪ್ರತಿ ವಾರ ಯುವ ಜನರಲ್ಲಿ ಫ್ಯಾಶನ್ ಪ್ರಜ್ಞೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಶೈಲಿಯ ಮತ್ತು ವಿನ್ಯಾಸಗಳ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದೇವೆ. ನಮ್ಮ ಹೊಸ ಸಂಗ್ರಹದ ಉತ್ಪನ್ನಗಳು ದೇಶಾದ್ಯಂತ ಇರುವ 18 ಸ್ಟೋರ್ಗಳಲ್ಲಿ ಲಭ್ಯವಿವೆ. ದಿನದಿಂದ ದಿನಕ್ಕೆ ಅತ್ಯಂತ ಜನಪ್ರಿಯವಾಗುತ್ತಿರುವ ನಮ್ಮ ಬ್ರಾಂಡ್ಗೆ ಮತ್ತು ಫಾರ್ಎವರ್ 21 ಅನ್ನು ಫ್ಯಾಶನ್ ಲೋಕದ ಜನಪ್ರಿಯ ತಾಣವನ್ನಾಗಿಸಲು ಬೆಂಬಲ ನೀಡುತ್ತಿರುವ ನಮ್ಮ ಎಲ್ಲಾ ಗ್ರಾಹಕರಿಗೆ ನಾವು ಧನ್ಯವಾದಗಳನ್ನು ಹೇಳುತ್ತೇವೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here