ಬಿಸಿಯೂಟದ ಅಕ್ಕಿ ಕದ್ದ ಮುಖ್ಯಶಿಕ್ಷಕಿ

0
204

ಮಂಡ್ಯ/ ಮಳವಳ್ಳಿ: ಸರ್ಕಾರ ಮಕ್ಕಳಿಗೆ ಮಧ್ಯಾಹ್ನ ದ ಬಿಸಿಯೂಟ ನೀಡಲು ಶಾಲೆಗೆ ಅಕ್ಕಿ ನೀಡಿದರೆ ಅದನ್ನೇ ಕದ್ದು ಮನೆಗೆ ಸಾಗಿಸಿದ ಮುಖ್ಯಶಿಕ್ಷಕಿಯನ್ನೂ ಗ್ರಾಮಸ್ಥರು ಘೇರಾವು ಮಾಡಿದ ಘಟನೆ ಮಳವಳ್ಳಿ ತಾಲ್ಲೂಕಿನ‌ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ . ವಾ/ಒ: ಸರ್ಕಾರಿ ಶಾಲೆಗಳು ಇಂದಿನಿಂದ ಪ್ರಾರಂಭವಾಗಿದ್ದು, ಕಳೆದ 23 ವರ್ಷದಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ವಡ್ಡರಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಾರದಮ್ಮ ಶಾಲೆಗೆ 11ಗಂಟೆಯಾದರೂ ಬಾರದ ಶಾರದಮ್ಮ ಇಂದು ಬೆಳಿಗ್ಗೆ 9 .30 ಗಂಟೆಗೆ ಸ್ಕೂಟರ್ ನಲ್ಲಿ ಬಂದು ಶಾಲೆಯಲ್ಲಿದ್ದ 50 ಕೆಜಿ ಅಕ್ಕಿಯನ್ನು ಸ್ಕೂಟರ್ ನಲ್ಲಿ ಸಾಗಿಸಿದರು ಎನ್ನುತ್ತಾರೆ ಗ್ರಾಮಸ್ಥರು. ವಾ/ಒ 2 : ಅಕ್ಕಿ ಸಾಗಿಸಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದರೂ ಏನು ಮಾಡಿಲ್ಲ‌ಎನ್ನುವ ರೀತಿ ಶಾರದಮ್ಮ ನಡೆದುಕೊಂಡು ತಾರಿಕೆಯ ಉತ್ತರ ನೀಡಿದರು. ನಂತರ ಗ್ರಾಮಸ್ಥರಿಗೆ ಈ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಈಕೆ ಮಾತನ್ನು ಕೇಳಿ ಪೊಲೀಸರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು . ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಭೀಮಾನಾಯಕ್ . ಬಿಸಿಯೂಟಸಹಾಯಕ ನಿರ್ದೇಶಕ ಡಿ.ಮಹದೇವು ಬೇಟಿ ಮುಖ್ಯಶಿಕ್ಷಕಿಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಣೆಗೆ ಒಳಪಡಿಸಿದಾಗ ಅಧಿಕಾರಿಯನ್ನೇ ಒಂದು ನಿಮಿಷ ಇರ್ರಿ ಎಂದು 25 ನಿಮಿಷ ಕಾಯಿಸಿ ನಂತರ. ಹೌದು ನಾನು 20 ,ಕೆಜಿ.ಅಕ್ಕಿಯಲ್ಲಿ ಬೀಡಿ ಸಿಗೆರೇಟ್ ಗಳು ಇದ್ದವು ಅದನ್ನು ತೋರಿಯಲು ತೋರಿಸಲು ತೆಗೆದುಕೊಂಡು ಹೋದೆ , ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಗೊತ್ತಾಗಲಿಲ್ಲ ಎಂದು ಮುಖ್ಯಶಿಕ್ಷಕಿ ಶಾರದಮ್ಮ ಒಪ್ಪಿಕೊಂಡಳು. ಸುಳ್ಳು ಸರ್ ಇವಳು 50 ಕೆ ಜಿ ಒಂದು ಮೂಟೆ ಹಾಕಿಕೊಂಡು ಹೋದಳು ಎಂದು ಗ್ರಾಮಸ್ಥರು ಹೇಳಿದರು. ಇವಳು ನಮ್ಮ ಶಾಲೆಗೆ ಬೇಡ ಎಂದು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಒತ್ತಾಯಿಸಿದರು. ತಾಲ್ಲೂಕಿನಲ್ಲಿ ಇದೇ ಮೊದಲಬಾರಿಗೆ ಬಿಸಿಯೂಟಕ್ಕೆ ಬಳಸುವ ಅಕ್ಕಿ ಯನ್ನು ಮುಖ್ಯಶಿಕ್ಷಕಿಯೊಬ್ಬರು ಕದ್ದು ಮನೆಗೆ ಸಾಗಿಸಿರುವ ದೂರು ನೀಡಿದ್ದು ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸುವುದಾಗಿ ಬಿಸಿಯೂಟ ಸಹಾಯಕ ನಿರ್ದೇಶಕ ಡಿ .ಮಹದೇವ ತಿಳಿಸಿದರ. ವರದಿ ಆದರಸಿ ಮೇಲಾಧಿಕಾರಿಗಳಿಗೆ ಸೂಕ್ತಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಭೀಮಾನಾಯಕ್ ತಿಳಿಸಿದರು. ಬೈಟ್ 1) ಬಿಸಿಯೂಟ ಸಹಾಯಕ ನಿರ್ದೇಶಕ ಡಿ. ಮಹದೇವ ಬೈಟ್ ಬೈಟ್ 2). ಬೀಮಾನಾಯಕ್ . ಕ್ಷೇತ್ರ ಶಿಕ್ಷಣಾಧಿಕಾರಿ . ಮಳವಳ್ಳಿ

LEAVE A REPLY

Please enter your comment!
Please enter your name here