ಬಿಸಿಲಿನ ತಾಪಕ್ಕೆ ವೃದ್ಧ ಬಲಿ

0
167

ಬೀದರ್/ ಬಸವಕಲ್ಯಾಣ: ಹೈದ್ರಬಾದ ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನ ಜೀವನ ತೀವ್ರ ಅಸ್ವಸ್ಥಗೊಂಡಿದ್ದು, ಬಿಸಿಲಿನ ತಾಪಕ್ಕೆ ಅಪರಿಚಿತ ವೃದ್ಧನೊಬ್ಬ ಮೃಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಯದ್ಲಾಪೂರ ಗ್ರಾಮದ ಸಮೀಪ ನಡೆದಿದೆ.

ನಾರಾಯಣಪುರ-ಯದ್ಲಾಪುರ ಮಾರ್ಗದ ರಸ್ತೆ ಬದಿ ಹೊಲವೊಂದರಲ್ಲಿ ಶವ ಪತ್ತೆಯಾಗಿದ್ದು, ಮೃತನ ವಿಳಾಸ ಪತ್ತೆಯಾಗಿಲ್ಲ. ಬಿಸಿಲಿನ ತಾಪ ತಾಳದೆ ನಿತ್ರಾಣಗೊಂಡ ಈತ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ. ಮಂಗಳವಾರ ಶವ ಪತ್ತೆಯಾಗಿದೆ. ಮೃತ ವೃದ್ಧನ ವಯಸ್ಸು ಸುಮಾರು 70 ವರ್ಷ ಇರಬಹು ಎಂದು ಅಂದಾಜಿಸಲಾಗಿದೆ. ಈ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಶಿವಾನಂದ ಪವಾಡಶೆಟ್ಟಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಡಾ. ಸೂರ್ಯಕಾಂತ ಬಾಳೂರಕರ್ ನೇತೃತ್ವದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ವೃದ್ಧನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here