ಬೀದಿನಾಟಕಗಳ ಮೂಲಕ ಜನಪರ ಯೋಜನೆಗಳ ಕುರಿತು ಜಾಗೃತಿ..

0
159

ಬಳ್ಳಾರಿ /ಹಡಗಲಿಯಲ್ಲಿ ವಿಶೇಷ ಪ್ರಚಾರ ಆಂದೋಲನಕ್ಕೆ ಜನರ ಮೆಚ್ಚುಗೆವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ  ರಾಜ್ಯ ಸರಕಾರದ ವಿವಿಧ ಜನಪರ ಯೋಜನೆಗಳ ಕುರಿತು ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುವ ವಿಶೇಷ ಪ್ರಚಾರ ಆಂದೋಲನ ಹೂವಿನಹಡಗಲಿ ತಾಲೂಕಿನಲ್ಲಿ ಆರಂಭವಾಗಿದ್ದು, ಜನರಿಂದ ಮೆಚ್ಚುಗೆಯಾಗುತ್ತಿದೆ.

ರಾಜ್ಯ ಸರಕಾರದ ಜನಪರ ಯೋಜನೆಗಳಾದ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಆರೋಗ್ಯಭಾಗ್ಯ, ಮೈತ್ರಿ,ಮನಸ್ವೀನಿ,ಋಣಮುಕ್ತ,ರೈತರ ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿಯೋಜಿತವಾದ ಜಾನಪದ ಕಲಾತಂಡದ ಕಲಾವಿದರು ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ರಾಜ್ಯ ಸರಕಾರ ಜಾರಿಗೆ ತಂದ ಯೋಜನೆಗಳು, ಅವುಗಳ ಮೂಲಕ ಜನರ ಜೀವನದಲ್ಲಾದ ಬದಲಾವಣೆ ಮತ್ತು ನಾಡಿನ ಜನರ ಕಲ್ಯಾಣಕ್ಕಾಗಿ ಸರಕಾರ ಕಂಕಣಬದ್ಧವಾಗಿರುವ ಅಂಶಗಳನ್ನು ಕಲಾವಿದರು ತಮ್ಮ ಬೀದಿನಾಟಕ ಮತ್ತು ಹಾಡುಗಳ ಮೂಲಕ ಗ್ರಾಮಗಳ ಜನರಿಗೆ ತಿಳಿಸುತ್ತಿದ್ದು, ಈ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ವಿಶೇಷ ಪ್ರಚಾರ ಆಂದೋಲನವು ಹೂವಿನ ಹಡಗಲಿ ತಾಲೂಕಿನಲ್ಲಿ ಜು.17ರಿಂದ ಆರಂಭವಾಗಿದ್ದು, ಈಗಾಗಲೇ ಇಟಗಿ, ವೀರಾಪುರ, ಬೂದನೂರು, ದಾಸನಹಳ್ಳಿ,ಕತ್ತೆಬೆನ್ನೂರ್, ಗಿರಿಯಾಪುರ,ಬ್ಯಾಲಹುಣಸಿ,ಮಕರಬ್ಬಿ,ಬೀರಬ್ಬಿ, ಹರಳೀಹಳ್ಳಿ, ಮಾಗಳ,ಅಯ್ಯನಹಳ್ಳಿ,ತಿಮ್ಮಲಪುರ,ನವಲಿ,ಕೊಟ್ನಕಲ್ಲು,ಹಗರನೂರು,ಸೊವೇನಹಳ್ಳಿ, ಮುದ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ್ದು, ಈ ಸಂದರ್ಭದಲ್ಲಿ ಜನರಿಂದ ಸರಕಾರದ ಯೋಜನೆಗಳ ಕುರಿತು ಮೆಚ್ಚುಗೆ ಮಾತುಗಳು ವ್ಯಕ್ತಪಡಿಸುವುದರ ಜತೆಗೆ,ಇನ್ನೂ ಈ ಜನಪರ ಯೋಜನೆಗಳಲ್ಲಿ ಇನ್ನೂ ಕೆಲ ಅಂಶಗಳು ಸೇರಿಸಿದರೇ ಸೂಕ್ತ ಎಂಬ ಸಲಹೆಗಳನ್ನು ವ್ಯಕ್ತಪಡಿಸಿರುವುದು ಕಂಡುಬಂದಿತು.
ವಿಶೇಷ ಪ್ರಚಾರ ಆಂದೋಲನ ವಾಹನವು ಕಲಾವಿದರೊಂದಿಗೆ ಆ.9ರವರೆಗೆ ಹೂವಿನಹಡಗಲಿ ತಾಲೂಕಿನ ಹಿರೇಮಲ್ಲನಕೇರೆ, ದಾಸರಹಳ್ಳಿ,ಶಿವಪುರ, ಹಿರೇಕೊಳಚಿ,ಚಿಕ್ಕಕೋಳಚಿ, ಹಿರೇಹಡಗಲಿ,ಮೀನಳ್ಳಿ,ಹೊಳಲು,ದೊಂಬ್ರಹಳ್ಳಿ,ನಡುವಿಹಳ್ಳಿ ತಾಂಡ, ಮೈಲಾರ,ಕುರವತ್ತಿ,ಸಿದ್ದಾಪುರ, ಹರವಿ, ನಾಗತಿಬಸಾಪುರ,ವಿನೋಬಾನಗರ, ಮುದೇನೂರ, ನಂದೀಹಳ್ಳಿ,ಉತ್ತಂಗಿ,ಸೋಗಿ, ಅಡವಿಮಲ್ಲನಕೇರಿ, ಅಡವಿಮಲ್ಲನಕೇರಿ ತಾಂಡಾ,ಪೋತಲಕಟ್ಟ, ಉಪನಾಯಕನಹಳ್ಳಿ, ದೇವಗೊಂಡನಹಳ್ಳಿ, ಅಂಕನಹಳ್ಳಿ, ಮದ್ಲಗಟ್ಟ, ಅಲಬೂರು, ದಿಬ್ಬದಹಳ್ಳಿ,ಹನಸಿ ಗ್ರಾಮಗಳಲ್ಲಿ ಸಂಚರಿಸಿ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸಲಿದೆ ಎಂದು ವಾರ್ತಾ ಮತ್ತು ಸಾರ್ವಜನಿ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ ತಿಳಿಸಿದರು.

LEAVE A REPLY

Please enter your comment!
Please enter your name here