ಬೀಳಲಿದೆ ಶಾಲೆ…ಎಚ್ಚರ ಎಚ್ಚರ.

0
98

ಚಿಕ್ಕಬಳ್ಳಾಪುರ/ ಚಿಂತಾಮಣಿ: ಸರ್ಕಾರ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡುತ್ತಿದು ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡುತ್ತಿದ್ದರೂ ಹಲವಾರು ಸರ್ಕಾರಿ ಶಾಲೆಯ ಕಟ್ಟಡಗಳು ಬೀಳುವ ಪರಿಸ್ಥಿತಿಯಲ್ಲಿವೆ.

ಇದಕ್ಕೆ ಉದಾಹರಣೆ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ನಮ್ಮೂರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಈ ಶಾಲೆಯಲ್ಲಿ 230 ಕ್ಕಿಂತ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು,ಎರಡೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದು ಒಂದು ಕೊಠಡಿಗಳಲ್ಲಿ ಶಿಕ್ಷಕರು ವಿಶ್ರಾಂತಿ ಪಡೆಯಲು ಉಪಯೋಗಿಸುತ್ತಿದ್ದಾರೆ. ಈ ಶಾಲೆಯ ಮೇಲ್ಛಾವಣಿ ಯಾವುದೇ ಸಮಯದಲ್ಲೂ ಬೀಳುವ ಸ್ಥಿತಿಯಲ್ಲಿದೆ .

ಹಲವಾರು ಬಾರಿ ಶಿಕ್ಷಣ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ .
ಕಳೆದ ಒಂದು ತಿಂಗಳ ಹಿಂದೆ ಮೇಲ್ಛಾವಣಿ ಶಿಕ್ಷಕರ ಮೇಲೆ ಬಿದ್ದಿರುವ ಘಟನೆ ಕೂಡ ಈಗಾಗಲೇ ನಡೆದಿದೆ.
ಶಿಥಿಲಾವಸ್ಥೆ ತಲುಪಿರುವ ಈ ಕಟ್ಟಡ ಸ್ವಲ್ಪ ಪ್ರಮಾಣದಮಳೆ ಬಿದ್ದರೂ ಕಟ್ಟಡ ಬೀಳುವ ಅವಕಾಶ ವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಶಾಲೆಯ ಕಟ್ಟಡವನ್ನು ದುರಸ್ಥಿಗೊಳಿಸ ದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

LEAVE A REPLY

Please enter your comment!
Please enter your name here