ಬೀಳ್ಕೊಡುಗೆ ಕಾರ್ಯಕ್ರಮ..

0
197

ಬಳ್ಳಾರಿ /ಹೊಸಪೇಟೆ:ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಇಲಾಖೆವಾರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದು ಇಲ್ಲಿನ ತಾ.ಪಂ. ಕಾರ್ಯಾನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ ಹೇಳಿದರು.

ತಾಲೂಕು ಪಂಚಾಯಿತಿ  ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಾನು ಕೊಪ್ಪಳ, ಬಳ್ಳಾರಿ,ಗದಗ ಜಿಲ್ಲೆಗಳಲ್ಲಿ ಸೇರಿದಂತೆ ಇತರ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿ ಬಂದಿದ್ದು, ಕಳೆದ ಶನಿವಾರದಿಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ಮುಟ್ಟಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ, ಇದಕ್ಕೆ ಗ್ರಾಮ ಪಂಚಾಯಿತಿ, ಪಿಡಿಓಗಳು  ಮತ್ತು ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ. ತಾ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗೆ ನಾಗರಿಕರು, ದೂರವಾಣಿ ಮಾಡಿದರೆ ಸಾಕು ನಾನು ಸಾಧ್ಯವಾದಷ್ಟು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರ ಸಮಸ್ಯೆಗಳಿಗೆ ಪಿಡಿಓಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಕಾರ್ಯನಿರ್ವಹಿಸಿ ತಾಲೂಕು ಪಂಚಾಯಿತಿಗೆ ಹೆಸರನ್ನು ತರುವಂತೆ ಹೇಳಿದರು.

ಪ್ರಭಾರಿ ಇಓ ಆಗಿದ್ದ ರವೀಂದ್ರ ಅವರು ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ಇತರ ಇಲಾಖೆಯ ಅಧಿಕಾರಿಗಳು ಸಿಬ್ಬಂಧಿಗಳು ಉತ್ತಮ ಕಾರ್ಯ ನಿರ್ವಹಿಸಿದಂತೆ ಮುಂದಿನ ದಿನಗಳಲ್ಲಿ ಕೂಡ ನೂತನವಾಗಿ ಅಧಿಕಾರ ಸ್ವೀಕರಿಸಿದ ಇಓ ಅವರಿಗೆ ಸಹಕಾರ ನೀಡಬೇಕು ಎಂದರು.

ನಿವೃತ್ತ ಇಓ ರಮೇಶ್ ತಳವಾರ ಅವರು ಟಿ.ವೆಂಕೋಬಪ್ಪ ಅವರ ಪರಿಚಯ ಮತ್ತು ಕಾರ್ಯ ಸಾಧನೆ ಕುರಿತು ಪರಿಚಯಿಸಿದರು. ಒಕ್ಕೂಟದ ಅಧ್ಯಕ್ಷ ಜಂಬಯ್ಯ ನಾಯಕ,ಗುಜ್ಜಲ ಶಿವರಾಮಪ್ಪ, ಎಲ್.ಸಿದ್ದನಗೌಡ,ತಾಯಪ್ಪ ನಾಯಕ ಹಾಗೂ ತಾಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ರವೀಂದ್ರ ಅವರನ್ನು ಬೀಳ್ಕೊಟ್ಟು ವೆಂಕೋಬಪ್ಪ ಅವರನ್ನು ಸ್ವಾಗತಿಸಿಕೊಂಡರು

LEAVE A REPLY

Please enter your comment!
Please enter your name here