ಬುದ್ದ ಅಧಿಕಾರವನ್ನು ತ್ಯಜಿಸಿದ್ದು ನೀರಿಗಾಗಿ

0
195

ಮಂಡ್ಯ/ ಮಳವಳ್ಳಿ : ಬುದ್ದ ತನ್ನ ಮಹಾರಾಜನ ಪಟ್ಟವನ್ನು ತೊರೆಯಲು ಬಡವ, ಕುಷ್ಠರೋಗಿಯನ್ನು ನೋಡಿ ಮರುಕ ಹುಟ್ಟಿ ಅಧಿಕಾರ ಬಿಟ್ಟು ಹೋದರು ಎನ್ನುವುದು ತಪ್ಪು ನೀರಿಗಾಗಿ ಅವರು ಅಧಿಕಾರವನ್ನು ತ್ಯಜಿಸಿ ಸನ್ಯಾಸವನ್ನು ಸ್ವೀಕರಿಸಿದ್ದರು. ಎಂದು ಮೈಸೂರು ವಿ.ವಿ ಪರೀಕ್ಷಾಂಗ ಕಲುಸಚಿವರಾದ ಪ್ರೋ.ಜೆ ಸೋಮಶೇಖರ್ ತಿಳಿಸಿದರು. 

ಮಳವಳ್ಳಿ ಪಟ್ಟಣದ ಭಗವಾನ್ ಬುದ್ಧ ಕಾಲೇಜು ಆವರಣದಲ್ಲಿ ನೆಹರು ಯುವ ಕೇಂದ್ರ ಹಾಗೂ ಭಗವಾನ್ ಬುದ್ದ ಸಮೂಹ ಶಿಕ್ಷಣ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿವಸ ಹಾಗೂ ಪ್ರಥಮ ವಷ೯ದ ಬಿಇಡಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿ. ಬರಗಾಲ ಈಗ ಬಂದಿಲ್ಲ ಹಿಂದಿನ ಕಾಲದಿಂದಲೂ ಬಂದಿದೆ . ಬುಧ್ದನು ಸಹ ನೀರಿನ ಬವಣೆಯನ್ನು ಅನುಭವಿಸಿದ್ದಾರೆ.ಎಂದು ಬಾಬ ಸಾಹೇಬ ಅಂಬೇಡ್ಕರ್ ರವರು ತಿಳಿಸಿದ್ದಾರೆ. ಎಂದರು. ಪ್ರಾಧ್ಯಾಪಕ ಡಾ.ಎಲ್ ಪ್ರಸನ್ನ ಕುಮಾರ್ ಮಾತನಾಡಿ ಪ್ರಪಂಚದಲ್ಲಿ ಹೆಚ್ಚು ನೀರು ವ್ಯಯ ಮಾಡುತ್ತಿರುವುದು ಮಂಡ್ಯ ಜಿಲ್ಲೆಯ ಜನರು ಎಂದು ವಿಷಾದ ವ್ಯಕ್ತ ಪಡಿಸಿದರು. ತಮ್ಮ ಮನೆಯಲ್ಲಿ ಪೋಲಾಗುವ ನೀರುಯನ್ನು ಶೇಖರಣೆ ಮಾಡುವಂತೆ ಮನವಿ ಮಾಡಿದರು

LEAVE A REPLY

Please enter your comment!
Please enter your name here