ಬುದ್ದ ಸಪ್ತಾಹ …

0
188

ಬೆಂಗಳೂರು/ಮಹದೇವಪುರ: ಜ್ಞಾನ ಪಡೆದ ದಿನ, ಮಹಾಪರಿಣಿ ನಿಬಾಣ ಪಡೆದ ದಿನ, ಬಗವನ್ ಬುದ್ದರವರು ಹುಟ್ಟಿದ ಮೂರು ಘಟನೆಗಳು ನೆಡೆದ ವಿಶೇಷ ದಿನವೂ ವೈಷಕ ಪೂರ್ಣಿಮಾ ದಿನವನ್ನು ಬುದ್ದ ಸಪ್ತಾಹ ದಿನವೆಂದು ಇಡೀ ವಿಶ್ವ ಸಂಸ್ಥೆಯು ಸಹ ಆಚರಣೆ ಮಾಡಲಾಗುತ್ತದೆ ಎಂದು ಬೆಂಗಳೂರಿನ ಮಹಾಭೋದಿ ಸೊಸೈಟಿ ಕಾರ್ಯದರ್ಶಿ ಬಿಕ್ಕು ಅನಂದ್ ರವರು ತಿಳಿಸಿದರು .
ಬೆಂಗಳೂರು ಪೂರ್ವ ತಾಲ್ಲೂಕಿನ ಮಹದೇವಪುರ ಕ್ಷೇತ್ರದ ದೊಡ್ಡಬನಹಳ್ಳಿಯಲ್ಲಿ ಭಾಗವನ್ ಬುದ್ದರವರ 2562ನೇ ಜಯಂತಿಯ ಅಂಗವಾಗಿ “ಬುದ್ದ ಸಪ್ತಾಹ”ವನ್ನು ಬುದ್ದ ಭೂಮಿ ಪ್ರತಿಷ್ಠಾನ ಟ್ರಸ್ಟ್ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಬಿಕ್ಕು ಅನಂದ್, ಸುಮಾರು 65 ವರ್ಷಗಳಿಂದ ಬೋಧಿ ಸಪ್ತಾಹ ಬೆಂಗಳೂರಿನಲ್ಲಿ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಿಗೆ, ಹಳ್ಳಿಗಳಿಗೆ ಭೇಟಿ ನೀಡಿ ಭಗವಾನ್ ಬದ್ಧನ ಸಂದೇಶವನ್ನು ತಲುಪಿಸುತ್ತಿದ್ದೇವೆ. ಭಗವಾನ್ ಬುದ್ಧರವರ ಶಾಂತಿ, ಕರುಣಾ, ಅಹಿಂಸಾ ಹಾಗೂ ಜ್ಞಾನದ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದೇವೆ ನಮ್ಮ ದೇಶದಲ್ಲಿ ಎಲ್ಲರಿಗೂ ಸುಖ ಶಾಂತಿ ಪ್ರಾಪ್ತಿಯಗಲಿ ಎಂದು ಹಾರೈಸಿದರು.
ದೊಡ್ಡಬನಹಳ್ಳಿಯಲ್ಲಿ ವೈಶಾಖ ಪೂರ್ಣಿಮಾ ಪ್ರಯುಕ್ತವಾಗಿ ಸುಮಾರು 15 ವರ್ಷಗಳಲ್ಲಿ ಭಗವಾನ್ ಬುದ್ಧನ ಪ್ರತಿಷ್ಠಾನವನ್ನು ಪೂರ್ಣಗೊಳಿಸಿ ಉದ್ಘಾಟನೆಯನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮವು 30ನೇ ತಾರಿಖಿನವರೆಗೂ ಸತತವಾಗಿ ನೆಡೆಯುವುದು, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಈ ಕಾರ್ಯಕ್ರಮದಲ್ಲಿ ಪಂಚಶೀಲ ಕೊಡಿವುದು, ಶಾಂತಿ, ಭಗವಾನ್ ಬುದ್ಧನ ತತ್ವಗಳನ್ನು ಹಾಗೂ ದೇಶದ ವಿಚಾರವನ್ನು ತಿಳಿಸಿಕೊಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಕೂಡ ಹಮ್ಮಿಕೊಂಡಿದ್ದು ಅದರ ವಿಜೇತರನ್ನು 30ನೇ ತರಿಕು ಅಂದರೆ ಬುದ್ಧ ಪೂರ್ಣಿಮಾ ದಿನದಂದು ಘೋಷಣೆ ಮಾಡಲಾಗುತ್ತದೆ ಎಂದು ಬುದ್ದ ಭೂಮಿ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದರು.
ಈ ಸಂದರ್ಭದಲ್ಲಿ ನೂರಾರು ಬುದ್ದ ಅನುಯಾಯಿಗಳು, ತಾಲ್ಲೂಕು ಪಂಚಾಯತಿ ಸದಸ್ಯ ಅದೂರು ಮುನಿರಾಜ್, ಗಂಗಾಧರ್, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here