ಬುದ್ಧಪೂರ್ಣಿಮೆಯ. ಪ್ರಯುಕ್ತ ಮೇಣದಬತ್ತಿ ಮೆರವಣಿಗೆ

0
143

ಮಂಡ್ಯ/ ಮಳವಳ್ಳಿ: ಬೌದ್ಧ ಧರ್ಮ ಸಂಸ್ಥಾಪಕ ಶಾಂತಿ ಧೂತ ಬುದ್ಧನ ಗೌತಮ ಬುದ್ಧ 2561ನೇ ವರ್ಷದ ಬುದ್ಧಪೂರ್ಣಿಮೆಯನ್ನು ಮಳವಳ್ಳಿ ಪಟ್ಟಣದಲ್ಲಿ ಶಾಂತಿ ಮೌನ ಮೇಣದಬತ್ತಿ ಮೆರವಣಿಗೆ ಮೂಲಕ ಆಚರಿಸಲಾಯಿತು. ಪಟ್ಟಣದ ಭಗವಾನ್ ಬುದ್ದ ಶಿಕ್ಷಣ ಸಂಸ್ಥೆ.ವತಿಯಿಂದ ಅನಂತ ರಾ ವೃತ್ತದಿಂದ ಪ್ರಮುಖರಸ್ತೆಯ ಭಗವಾನ್ ಬುದ್ದ ಕಾಲೇಜಿನ ವರೆಗೂ ಮೆರವಣಿಗೆ ನಡೆಸಲಾಯಿತು. ನಂತರ ವೇದಿಕೆ ಕಾಯ೯ಕ್ರಮ ವನ್ನು ಉಪನ್ಯಾಸಕ ದೊಡ್ಡಬೋರಯ್ಯ ಉದ್ಘಾಟಿಸಿ ಮಾತನಾಡಿ ಬುದ್ಧುರು ಪ್ರತಿಪಾದಿಸಿದ ಪಂಚಶೀಲ ತತ್ವಗಳಾದ ಕಳ್ಳತನ ಮಾಡದಿರುವುದು, ಅಹಿಂಸೆ ಪಾಲಿಸುವುದು, ಪರ ಸ್ತ್ರೀ ಸಂಪರ್ಕದಿಂದ ದೂರುವಿರುವುದು, ಮಿತ್ಯ ನುಡಿಯದಿರುವುದು, ಪರರಿಗೆ ಸಹಾಯ ಹಸ್ತ ಚಾಚುವಂತಹ ತತ್ವಗಳನ್ನು ನಾಗರಿಕರು ಪಾಲಿಸಿದರೆ ಉತ್ತಮ ಬಾಳ್ವೆ ನಡೆಸಲು ಸಾಧ್ಯ. ಶತಕಗಳ ಹಿಂದೆ ಜಗತ್ತಿನಲ್ಲಿ ಚಾಲ್ತಿಯಲ್ಲಿದ್ದ ಧಾರ್ಮಿಕ ಮೌಡ್ಯತೆಯನ್ನು ದಿಕ್ಕರಿಸಿ ಬುದ್ಧರು ಶಾಂತಿಯುತ ಸಮಾಜದ ಸಲುವಾಗಿ ಭೌದ್ಧ ಧರ್ಮ ಸ್ಥಾಪಿಸಿದರು, ಭಾರತ ಸೇರಿದಂತೆ 63 ರಾಷ್ಟ್ರಗಳಲ್ಲಿ ಬೌಧ್ದ ಧರ್ಮಸ್ಥಾಪಿಸಿರುವುದು ಶ್ಲಾಘನೀಯ ಎಂದರು. ಬೌದ್ದ ಆ ಮೂಲ ಧರ್ಮವಾದ ಬೌದ್ಧ ಧರ್ಮ ಇಂದು ನಶಿಸುತ್ತಿದ್ದು, ಬುದ್ಧರ ತತ್ವಗಳನ್ನು ಜನರಿಗೆ ತಿಳಿಸುವ ಮೂಲಕ ಧರ್ಮಕ್ಕೆ ಮತ್ತೊಮ್ಮೆ ಜೀವ ತುಂಬ ಬೇಕಿದೆ ಎಂದರು ಕಾಯ೯ಕ್ರಮ ದ ಅದ್ಯಕ್ಷತೆಯನ್ನು ಭಗವಾನ್ ಶಿಕ್ಷಣ ಸಂಸ್ಥೆ ಅದ್ಯಕ್ಷ ಯಮದೂರುಸಿದ್ದರಾಜು ವಹಿಸಿದ್ದರು. ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ಚೇತನ್ ಕುಮಾರ್, ಮಹೇಂದ್ರ, ಡಾ.ಸುರೇಶ್. ಅಂಬರಹಳ್ಳಿಸ್ವಾಮಿ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here