ಬುದ್ಧಿಮಾಂದ್ಯ ಮಕ್ಕಳು ತಯಾರಿಸಿದ ಹಣತೆ ಬಳಸಲು ಕರೆ..

0
181

ಬಳ್ಳಾರಿ/ಹೊಸಪೇಟೆ:ಈ ಬಾರಿಯ ದೀಪಾವಳಿ ಹಬ್ಬಕ್ಕೆ ಬುದ್ಧಿಮಾಂದ್ಯ ಮಕ್ಕಳು ತಯಾರಿಸಿದ ಹಣತೆ ಬಳಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕೆಂದು ಬಿಜೆಪಿ ಮಂಡಲ ಘಟಕ ‌ಮನವಿ ಮಾಡಿದೆ.ದೀಪಾವಳಿ ಬೆಳಕಿನ ಹಬ್ಬ ಇದು ನಮ್ಮ ಬಾಳನ್ನಷ್ಟೇ ಅಲ್ಲ ಇತರರ ಬಾಳಿಗೂ ಬೆಳಕನ್ನು ನೀಡಬೇಕು ಹೀಗಾಗಿ ಪ್ರಪಂಚದ ಅರಿವೇ ಇಲ್ಲದಿರುವ ಮಕ್ಕಳು ತಯಾರಿಸಿದ ಬಣ್ಣ ಬಣ್ಣದ ಈ ಹಣತೆ ಬಳಸುವ ಮೂಲಕ ಪ್ರೋತ್ಸಾಹಿಸಬೇಕಿದೆ.ಅಮರಾವತಿಯಲ್ಲಿರುವ ಈ ಶಾಲೆಗೆ ಒಮ್ಮೆ ತೆರಳುವ ಮೂಲಕ‌ ಪ್ರಪಂಚದ ಅರಿವೇ ಇಲ್ಲದೇ ಇರುವ ಮಕ್ಕಳು ಮಾಡುವ ಈ ಚಟುವಟಿಕೆಗಳನ್ನು ಪ್ರತಿಯೊಬ್ಬರೂ ನೋಡಬೇಕಿದೆ. ಮಾರುಕಟ್ಟೆಯಲ್ಲಿರುಂತೆ ಈ ಮಕ್ಕಳು ಕೂಡ ಬಣ್ಣ ಬಣ್ಣದ ಹಣತೆ ತಯಾರಿಸಿದ್ದಾರೆ. ನೀವು ಕೊಳ್ಳಿ ನಿಮ್ಮವರಿಗೂ ಕೊಂಡುಕೊಳ್ಳಲು ಹೇಳಿ ಇದು ಸಹಾಯವಲ್ಲ ಪ್ರೋತ್ಸಾಹ ಎಂದು ಬಸವರಾಜ ನಲ್ವತ್ತಾಡ ಹೇಳಿದರು ಇ ಸಂದರ್ಭದಲ್ಲಿ ತಾಲೂಕು ಬಿ ಜೆ ಪಿ ಘಟಕದ ಅಧ್ಯಕ್ಷ ಸಂದಿಪ್ ಸಿಂಗ್ ಮಖಂಡರಾದ ಆಶೋಕ ಜೀರೆ ಕಾಶಿನಾಧ ಜೀವರಾಜ ಸೇರಿದಂತೆ ಇತರರು ಇದ್ದರು

ಮಾಹಿತಿಗಾಗಿ ಸಂಪರ್ಕಿಸಿ: ಬಸವರಾಜ್,
ಮೊ: 7353739293

LEAVE A REPLY

Please enter your comment!
Please enter your name here