ಬೆಂಕಿ ಹಚ್ಚಿ ಕೊಲೆಪ್ರಯತ್ನ…

0
349

ಬಳ್ಳಾರಿ /ಹೊಸಪೇಟೆ:ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಸಿದಂತೆ ತಲೆ ಮರೆಸಿಕೊಂಡಿದ್ದ ವ್ಯಕ್ತಿ ಯೊಬ್ಬರು ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ ನಡೆಸಿದ ಘಟನೆ ತಾಲ್ಲೂಕಿನ ಕಮಲಾಪುರ ಹೋಬಳಿಯ ಸೀತರಾಂ ತಾಂಡದಲ್ಲಿ ಸೋಮವಾರ ಜರುಗಿದೆ.

ಕೌಟಂಬಿಕ ಕಲಹದ ಹಿನ್ನಲೆಯಲ್ಲಿ ಸೀತರಾಂ ತಾಂಡ ಗ್ರಾಮದ ನಿವಾಸಿ ರವಿವರ್ಮ (30) ಎಂಬುವರ ಮೇಲೆ ಸೀಮೆ ಎಣ್ಣೆ ಸುರಿದ ಕೊಲೆ ಮಾಡುವ ಯತ್ನ ನಡೆದಿದ್ದು, ಈ ಘಟನೆಯಲ್ಲಿ ಗಾಯಗೊಂಡ ರವಿವರ್ಮ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ಹಿನ್ನಲೆ: ಕಳೆದ ನಾಲ್ಕು ವರ್ಷದ ಹಿಂದೆ ಕವಿತಾಳನ್ನು ಮದುವೆಯಾಗಿದ್ದ ರವಿವರ್ಮನ ವಿರುದ್ಧ ಪತ್ನಿ ಕವಿತಾ ಹಾಗೂ ಅವರ ಕುಟುಂಬದವರು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣ ದಾಖಲು ಆಗುತ್ತಿದಂತಯೇ ಕವಿತಾ ಪತಿ ರವಿವರ್ಮಾ ತಲೆ ಮರೆಸಿಕೊಂಡಿದ್ದನು. ನಂತರ ನ್ಯಾಯಾಲಯ ದಿಂದ ಜಾಮೀನು ಪಡೆದು, ಸೋಮವಾರ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ಇವನ ಬರವಿಕೆಗಾಗಿ ಕಾದು ಕುಳಿತಿದ್ದ ಪತ್ನಿ ಕವಿತಾ ಮನೆ ಕಡೆಯವರು ಗ್ರಾಮದ ಹೊರವಲಯದಲ್ಲಿ ಹೋಗುತ್ತಿದ್ದ ರವಿವರ್ಮನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ರವಿವರ್ಮಾ ಗಾಯಗೊಂಡಿದ್ದು, ಕೂಡಲೇ ಗ್ರಾಮಸ್ಥರು, ಆತನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಕವಿತಾ ತಂದೆ ಲೋಕ್ಯಾನಾಯ್ಕ ಸೇರಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here