ಐಯೋನಾಗೆ ಕ್ರಿಸ್ ಗೇಲ್ ಬ್ರಾಂಡ್ ಅಂಬಾಸಿಡರ್

0
157

ಬೆಂಗಳೂರು/ಮಹದೇವಪುರ: ಭಾರತದಲ್ಲೆ ಪ್ರಥಮ ಎನ್ನಲಾದ ಸಾಹಸ ಮತ್ತು ಮನರಂಜಾ ತಾಣವಾದ ಐಯೋನಾ’ಗೆ ಖ್ಯಾತ ಕ್ರಿಕೇಟಿಗ ಕ್ರಿಸ್ ಗೇಲ್ ಬ್ರಾಂಡ್ ಅಂಬಾಸಿಡರ್ ಆಗಿದ್ದು ಇಂದು ಚಾಲನೆ ನೀಡಿದರು. ಬೆಂಗಳೂರಿನ ವೈಟ್ಫೀಲ್ಡ್ನ ವಜರ್ೀನಿಯಾ ಮಾಲ್ನಲ್ಲಿ ತೆರೆದಿರುವ ಗೇಮ್ ಸ್ಟೋರ್ಗೆ ಕ್ರಿಸ್ ಗೇಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ರಿಸ್ ಗೇಲ್ ನೋಡಲು ನೂರಾರು ಕ್ರಿಕೇಟ್ ಅಭಿಮಾನಿಗಳು ಹಾಗೂ ಮಕ್ಕಳು ನೆರೆದಿದ್ದು, ಮೈದಾನದಲ್ಲಿ ಕ್ರೀಡಾಬಿಮಾನಿಗಳನ್ನು ರಂಜಿಸುತ್ತಿದ್ದ ಗೇಲ್ ಇಲ್ಲಿ ತಮ್ಮ ವಿಭಿನ್ನ ನೃತ್ಯದ ಮೂಲಕ ರಂಜಿಸಿದರು. ಇದೇ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಕ್ರಿಸ್ ಗೇಲ್ ಮಕ್ಕಳು ವಿಡಿಯೋ ಗೇಮ್ ಹಾಗೂ ಕಂಪ್ಯೂಟರ್ನಲ್ಲಿ ಕುಳಿತು ಆಡುವ ಬದಲು ದೈಹಿಕ ಕ್ರೀಡೆಗಳಲ್ಲಿ ಸಹ ತೊಡಗಿಸಿಕೊಂಡು ಆರೋಗ್ಯವನ್ನು ವೃದ್ದಿಸಿಕೊಳ್ಳಬೇಕೆಂದು ತಿಳಿಸುವ ಮೂಲಕ ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here