ಬೆಂಗಳೂರು ನಮ್ಮ ಹೆಮ್ಮೆ ಯಾತ್ರೆ…

0
169

ಬೆಂಗಳೂರು/ಕೆ.ಆರ್.ಪುರ:ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚುನಾವಣ ಪ್ರಚಾರ ಬಿರುಸುಗೊಂಡಿದ್ದು ಬಿಜೆಪಿಉವರು ನಡೆಸಿದ ಬೆಂಗಳೂರು ರಕ್ಷಿಸಿ ಯಾತ್ರೆಗೆ ವಿರುದ್ದವಾಗಿ ಕಾಂಗ್ರೆಸ್ ಪಕ್ಷದವರು ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಯಾತ್ರೆ ಹಮ್ಮಿಕೊಂಡಿದ್ದು ಇಂದು ಕೆ.ಆರ್.ಪುರ ಕ್ಷೇತ್ರದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ , ಕೆಪಿಸಿಸಿ ಕಾರ್ಯಾದ್ಯಕ್ಷ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಚಾಲನೆ ನೀಡಿದರು.ರಸ್ತೆಯುದ್ದಕ್ಕು ಜನರು ಕೈಯಲ್ಲಿ ಕಾಂಗ್ರೆಸ್ ಬಾವುಟ, ಕಾಂಗ್ರೆಸ್ ಗೆ ಜೈ ಬಿಜೆಪಿಗೆ ದಿಕ್ಕಾರ ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ. ಮೊದಲಿಗೆ ರಾಮಮೂರ್ತಿನಗರ ಉತ್ತಮ್ ಸಾಗರ್ ಹೋಟೆಲ್ ಸರ್ಕಲ್ ನಿಂದ ಕೆ.ಆರ್.ಪುರ ಎಕ್ಸೆಟೆನ್ಷನ್ ವರೆಗು ೬ ಕಿ.ಮೇ ಪಾದಯಾತ್ರ ನಡೆಸಲಾಯಿತು. ಈ ಯಾತ್ರೆಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ದಿನೇಶ್ ಗುಂಡೂರಾವ್, ಎಂಎಲ್ಸಿ ನಾರಾಯಣಸ್ವಾಮಿ, ಸ್ಥಳಿಯ ಶಾಸಕ ಬಿ.ಎ. ಬಸವರಾಜ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಗಿಂತ ಹೆಚ್ಚಿನ ಅಪರಾದ ಕೃತ್ಯಗಳು ನಡೆದಿರುವುದು ಬೆಜೆಪಿ ಸರ್ಕಾರದಲ್ಲಿ ಎಂದು ತಿಳಿಸಿ, ವೇದಿಕೆಯಲ್ಲಿ ಬಿಜೆಪಿ ಪಕ್ಷದ ನಾಯಕರುಗಳ ಹಗರಣ ಹಾಗೂ ಕಾನೂನು ಸುವ್ಯವಸ್ಥೆಯ ಅಂಕಿ ಅಂಶಗಳುಳ್ಳ ಕೈ ಪಿಡಿ ಬಿಡುಗಡೆಗೊಳಿಸಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.ಬೆಂಗಳೂರು ಅಭಿವೃದ್ಧಿ ಗೆ ಹೆಚ್ಚು ಹಣ ನೀಡಿದ ಕೀರ್ತಿ‌ ಕಾಂಗ್ರೆಸ್ ಗೆ ಸಲ್ಲುತ್ತದೆ, ಬೆಂಗಳೂರನ್ನು ಗಾರ್ಬೆಜ್ ಸಿಟಿ‌ ಮಾಡಿದ್ದು ಬಿಜೆಪಿ. ಮಂಡೂರು ಹಾಗೂ ಮಾವಳ್ಳಿಪುರ ಸಮಸ್ಯೆ ಬಿಟ್ಟು ಹೋದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.೧೭ ವರೆ ಸಾವಿರ ಸಂಬಳ ಪೌರಕಾರ್ಮಿಕರಿಗೆ ನೀಡುವ ಕೆಲಸ ಕಾಂಗ್ರೆಸ್‌ ಮಾಡಿದೆ, ಬೆಂಗಳೂರಿನ ಶೇ೭೦ ರಷ್ಟು‌ ನೀರು ಸಂಸ್ಕರಿಸಿ ಕೋಲಾರಕ್ಕೆ ನೀರು ನೀಡುವ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರು ಸುತ್ತಮುತ್ತ‌ ಒತ್ತುವರಿಯಾಗಿದ್ದ ಒಂದೂವರೆ ಲಕ್ಷ ಕೋಟಿ ಬೆಲೆ ಬಾಳುವ ಜಮೀನು ತೆರವುಗೊಳಿಸಿ ವಶಕ್ಕೆ ತೆಗೆದುಕೊಂಡ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು ತಿಳಿಸಿ, ಮೋದಿ ಬರ್ತಾರೆ, ಅಮಿತ್ ಷಾ ಬರ್ತಾರೆ ಬೆಂಗಳೂರಿನ‌ ಬಗ್ಗೆ ಮಾತನಾಡಿ ಹೋಗುತ್ತಾರೆ ಮೊದಲು ಅವರ ನಗರಗಳಲ್ಲಿ ನೋಡಿಕೊಳಲ್ಲಿ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಉಸ್ತುವಾರಿ ಮುರಳಿದರ್ ರಾವ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿ ವಿರುದ್ದ ಲೇವಡಿ ಮಾಡಿದ್ದಕ್ಕೆ ತಿರುಗೇಟು ನೀಡಿದರು.

ರಾಹುಲ್ ಗಾಂದಿ ಬಗ್ಗೆ ಮಾತನಾಡಲು ಮುರಳಿದರ್ ಯಾರು, ಈ ರಾಜ್ಯಕ್ಕು ಅವರಿಗೂ ಏನು ಸಂಬಂದ, ಸುಳ್ಳು ಹೇಳುವ ಕೆಲಸ ಬಿಜೆಪಿ ಯವರದು, ಕೋಮುಗಲಭೆ ಮತ್ತು ಭಯೋತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವುದು ಯಾರು ಎಂಬುದು ಅರ್ಥ ಮಾಡುಕೊಳ್ಳಲಿ ಎಂದರು.ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದು ಪಕ್ಷಕ್ಕಿಂತ ಮತ್ತೊಂದು ಪಕ್ಷ ಬಿನ್ನವಾಗಿ ಕಾರ್ಯಕ್ರಮಗಳು, ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದ್ದ ಮತದಾರ ಪ್ರಭು ಯಾರಿಗೆ ಅಶಿರ್ವಾದ ಮಾಡುತ್ತಾನೆ ಎಂಬುದು ಚುನಾವಣ ಫಲಿತಾಂಶ ಬಂದ ನಂತರವಷ್ಟೇ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here