ಬೆಳೆಗಳಿಗೆ ಹಸಿರು ಹುಳು ಕಾಟ,ರೈತರಿಗೆ ಸಂಕಷ್ಟ

0
230

ಬಳ್ಳಾರಿ./ ಕೂಡ್ಲಿಗಿ:ಗಣಿನಾಡು ಬಳ್ಳಾರಿಯಲ್ಲಿ ರೈತರಿಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. ಮುಂಗಾರು ಕೈ ಕೊಟ್ಟ ಕಾರಣ ಬೆಳೆಗಳು ಸಮರ್ಪಕವಾಗಿ ಬೆಳೆಯಲು ಆಗದೇ, ಇದ್ದಿದ್ದು ಒಂದು ಸಮಸ್ಯೆಯಾದರೆ, ಮುಂಗಾರು ತಡವಾಗಿ ಆಗಮಿಸಿದರೂ, ಅಲ್ಪ ಸ್ವಲ್ಪ ಬೆಳೆದ ಬೆಳೆಗೆ ಈಗ ಕೀಟ ಬಾಧೆ ಪ್ರಾರಂಭವಾಗಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಭಾಗದಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿಗೆ ಸದ್ಯ ಕೀಟ ಬಾಧೆ ಎದುರಾಗಿದೆ. ಕೂಡ್ಲಿಗಿ ತಾಲೂಕಿನ ನಾನಾ ಭಾಗ ಮತ್ತು ಸಿರುಗುಪ್ಪ ತಾಲೂಕಿನ ನಾನಾ ಭಾಗದಲ್ಲಿ ರೈತರು ಸದ್ಯ ಹಸೀರು ಹುಳು ಕಾಟ ಎದುರಿಸುತ್ತಿದ್ದಾರೆ. ಮೆಕ್ಕೆಜೋಳದ ತೆನೆಗಳಿಗೆ ಹಸೀರು ಹುಳು ಕಾಟ ಪ್ರಾರಂಭವಾಗಿದೆ. ಕಳೆದ ವಾರದಲ್ಲಿ ಎರಡ್ಮೂರು ದಿನ ಮೇಲಿಂದ ಮೇಲೆ ಮಳೆಯಾದ ಕಾರಣ ಬೆಳೆಗಳು ನೀರಿನಲ್ಲಿ ಹೆಚ್ಚು ತೊಯ್ದ ಕಾರಣ, ತೆನೆ ಕಟ್ಟುವುದು ಕಷ್ಟವಾಗಿದೆ ಜತೆಗೆ, ಜೊಳ್ಳು ತೆನೆ ಬರುವ ಭಯವನ್ನು ರೈತರು ಎದುರಿಸುತ್ತಿದ್ದರೇ, ಇತ್ತ ಹಸೀರು ಹುಳು ಕಾಟ ಜೋರಾಗಿಯೇ ಪ್ರಾರಂಭವಾಗಿದೆ. ಮಳೆರಾಯ ತಡವಾಗಿಯೇ ಬಂದಿದ್ದಾನಾದರೂ, ಸದ್ಯ ತೆನೆಯಲ್ಲಿ ಕಾಳು ಕಟ್ಟುವ ಸಮಯ, ಈ ಸಮಯದಲ್ಲಿ ಹಸೀರು ಹುಳು ಕಾಟ ಹೆಚ್ಚಾಗಿರುವುದು ರೈತರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಸೈನಿಕ ಹುಳು ಬಿದ್ದರೂ, ಕಾಳು ಹಾಳು ಮಾಡುವುದು ಕಡಿಮೆ, ಆದರೆ ಹಸೀರು ಹುಳು ಬೆಳೆಗೆ ಸಾಕಷ್ಟು ಡ್ಯಾಮೇಜ್ ಮಾಡುತ್ತದೆ ಎಂಬುದು ರೈತರಿಗೆ ಹೆಚ್ಚು ಅತಂಕ ತರುವಂತಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದ್ದು, ರೈತರಿಗೆ ಇಲಾಖೆ ಸರಿಯಾಗಿ ಮಾರ್ಗದರ್ಶನ ಮಾಡಬೇಕಿದೆ.

ರೈತರ ಬೆಳೆಗೆ ಕೀಟದ ಬಾಧೆ- ಮೆಕ್ಕೆಜೋಳ, ಮುಸುಕಿನ ಜೋಳ, ಹತ್ತಿ, ಮೆಣಸಿನಕಾಯಿ ಬೆಳೆಗಳಿಗೆ ಕೀಟ ಬಾಧೆ- ಹಸೀರು ಹುಳುವಿನ ಕಾಟಕ್ಕೆ ಬೆಸತ್ತ ರೈತರು- ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಭಾಗ, ಸಿರುಗುಪ್ಪ ತಾಲೂಕಿನ ಕೆಲ ಭಾಗದಲ್ಲಿ ಹೆಚ್ಚಾದ ಕೀಟ ಬಾಧೆ- ಕಾಳು ಕಟ್ಟುವ ಸಮಯದಲ್ಲಿ ಕೀಟ ಬಾಧೆ, ರೈತರಲ್ಲಿ ಹೆಚ್ಚಿದ ಆತಂಕ- ಮುಂಗಾರು ಕೈ ಕೊಟ್ಟರೂ, ತಡವಾಗಿ ಬಂದ ಮಳೆಯೇ ಈ ರೈತರಿಗೆ ಶಾಪ- ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಕೊರತೆ- ರೈತರ ನೆರವಿಗೆ ಕೃಷಿ ಇಲಾಖೆ ಧಾವಿಸಲು ಆಗ್ರಹ.

LEAVE A REPLY

Please enter your comment!
Please enter your name here