ಬೆಳ್ಳಂಬೆಳ್ಳಿಗ್ಗೆ ಎಸಿಬಿ ದಾಳಿ…

0
114

ವಿಜಯಪುರ:ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾ ಪಂಚಾಯತ್ತಿ ಸುಪರಿಂಟೆಂಡೆಂಟ್ ಸೋಮಶೇಖರ್ ತುಳಜಪ್ಪ ನಾಯಕ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ಮಲ್ಲೇಶ ನೇತೃತ್ವದಲ್ಲಿ10ಕ್ಕೂ ಹೆಚ್ಚು ಅಧಿಕಾರಿಗಳು ನಾಯಕ್ ಅವ್ರ ಎರಡು ನಿವಾಸಗಳ ಮೇಲೆ ದಾಳಿ ಸುದೀರ್ಘ 4 ಗಂಟೆಗೂ ಹೆಚ್ಚು ಕಾಲ ದಾಖಲಾತಿಗಳ ಪರಿಶೀಲನೆ ನಡೆಸಿದರು. ವಿಜಯಪುರ ತಾಲೂಕಿನ ಬಾರಾಕೊಟ್ರಿ ತಾಂಡಾದ ನಿವಾಸ ಹಾಗೂ ನಗರದ ಹರಿಕಾರ್ ಲೇಔಟ್ ನ ಅವ್ರ ಮತ್ತೊಂದು ನಿವಾಸದಲ್ಲಿ ಅಧಿಕಾರಿಗಳಿಗೆ ಬೆಳಿಗ್ಗೆಯಿಂದ ಬೀಡು ಬಿಟ್ಟಿದ್ದು ಬ್ಯಾಂಕ್ ಪಾಸ್ ಬುಕ್, ನಿವೇಶನ ಹಾಗೂ ಜಮೀನುಗಳ ದಾಖಲಾತಿ ಪರಿಶೀಲನೆ ನಡೆಸಿದರು. ಸೋಮಶೇಖರ್ ಅವ್ರು ಜಿಲ್ಲಾ ಪಂಚಾಯತ್ತಿ ನೀರಾವರಿ ಇಲಾಖೆಯ ಇಂಜಿನೀಯರಿಂಗ್ ವಿಭಾಗದ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸ್ತಾಯಿದ್ರು. ಇವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆಂಬ ಖಚಿತ ದೂರಿನ ಮೇಲೆ ಬೆಳಿಗ್ಗೆ6 ಗಂಟೆಯಿಂದ ಅವ್ರ ಎರಡೂ ನಿವಾಸಗಳ ಮೇಲೆ ಪರಿಶೀಲನೆ ನಡೆಯುತ್ತಿದ್ದು ಸೋಮಶೇಖರ್ ಅವ್ರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ…

LEAVE A REPLY

Please enter your comment!
Please enter your name here